ಲಾಭದಲ್ಲಿ ಶೇ. 30ರಷ್ಟು ಸೈನಿಕರ ನಿಧಿಗೆ; ‘ಕುಲದಲ್ಲಿ ಕೀಳ್ಯಾವುದೋ’ ನಿರ್ಮಾಪಕ ಘೋಷಣೆ

ಚಿತ್ರ ಬಿಡುಗಡೆಯಾಗಿ ಅದರಿಂದ ಬರುವ ಲಾಭದಲ್ಲಿ ಶೇ. 30ರಷ್ಟನ್ನು ಸೈನಿಕರ ಕಲ್ಯಾಣ ನಿಧಿಗೆ ಕೊಡುವುದಾಗಿ ‘ಕುಲದಲ್ಲಿ ಕೀಳ್ಯಾವುದೋ’ ನಿರ್ಮಾಪಕ ಸಂತೋಷ್ ಘೋಷಿಸಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ನಾಯಕನಾಗಿ ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ (Kuladali Keelyavudo) ಚಿತ್ರ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣವಾಯಿತು. ನಿವೃತ್ತ ಯೋಧರಾದ ಮಂಜುನಾಥ್, ಜಯರಾಮ್, ದೇವರಾಜ್, ಅಶೋಕ್ ಕುಮಾರ್, ಸತ್ಯಂ, ಮಧುಸೂದನ್, ಶೇಖರ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರಕ್ಕೆ ಸಾಕಷ್ಟು ಪ್ರಚಾರ ಮಾಡುತ್ತಿರುವುದಾಗಿ ಹೇಳಿದ ಮಡೆನೂರು ಮನು, ‘ನಮ್ಮ ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಒಂದೊಳ್ಳೆಯ ಕಥೆ ಮಾಡಿದ್ದಾರೆ. ಆ ಕಥೆ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸ ನನ್ನಗಿದೆ‌‌. ಹಾಗಾಗಿ ಕರ್ನಾಟಕದ ಉದ್ದಗಲಕ್ಕೂ ಪ್ರಚಾರ ಮಾಡುತ್ತಿದ್ದೇವೆ. ಇನ್ನೂ ನನ್ನ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರಿಗೆ, ನಿರ್ದೇಶಕರಿಗೆ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ’ ಎಂದರು ನಾಯಕ ಮಡೆನೂರ್ ಮನು.

ಈ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ ಎನ್ನುವ ನಿರ್ದೇಶಕ ರಾಮನಾರಾಯಣ್‍, ‘ಮನರಂಜನೆ ಒಂದೇ ಉದ್ದೇಶವಲ್ಲ, ಚಿತ್ರದಲ್ಲಿ ಹಲವು ಸಂದೇಶಗಳಿವೆ. ಸಿನಿಮಾ ನೋಡಿ ಪಾಠ ಕಲಿತ ಹಲವು ಉದಾಹರಣೆಗಳಿವೆ. ನಮ್ಮ ಚಿತ್ರದಲ್ಲೂ ಒಳ್ಳೆಯ ಉದ್ದೇಶವಿದೆ. ಚಿತ್ರ ಚೆನ್ನಾಗಿ ಬಂದಿದೆ’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಸಂತೋಷ್‍, ‘ದೇಶ ಕಾಯ್ದ ಯೋಧರಿಂದ ನಮ್ಮ ಚಿತ್ರದ ಬಿಡುಗಡೆಯಾಗಿದ್ದು ನನ್ನ‌ ಮನಸ್ಸಿಗೆ ಬಹಳ ಖುಷಿಯಾಗಿದೆ. ಹೊಸ ನಿರ್ಮಾಪಕರನ್ನು ದುರ್ಬಳಿಕೆ ಮಾಡಿಕೊಳ್ಳುವವರು ಹೆಚ್ಚು ಅಂತ ನನಗೆ ಅನೇಕರು ಹೇಳಿದ್ದರು. ಆದರೆ, ನನ್ನ ಚಿತ್ರತಂಡ ನಿರ್ಮಾಪಕರ ಪರ ನಿಂತಿದೆ. ಯಾರಿಂದಲೂ ನನಗೆ ಯಾವ ವಿಷಯದಲ್ಲೂ ಬೇಜಾರಾಗಿಲ್ಲ. ಹಾಗಾಗಿ ಈ ಸಮಯದಲ್ಲಿ ನನಗೆ ಈ ತಂಡ ಪರಿಚಯಿಸಿದ ಯೋಗರಾಜ್ ಭಟ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಹಾಗೂ ನಮ್ಮ ಚಿತ್ರದಲ್ಲಿ ಬರುವ ಲಾಭದ 30ರಷ್ಟು ಭಾಗವನ್ನು ಯೋಧರಿಗೆ ಅರ್ಪಿಸುತ್ತೇನೆ’ ಎಂದು ನಿರ್ಮಾಪಕ ಸಂತೋಷ್ ಕುಮಾರ್ ತಿಳಿಸಿದರು.

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಮಡೆನೂರು ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “ಲಾಭದಲ್ಲಿ ಶೇ. 30ರಷ್ಟು ಸೈನಿಕರ ನಿಧಿಗೆ; ‘ಕುಲದಲ್ಲಿ ಕೀಳ್ಯಾವುದೋ’ ನಿರ್ಮಾಪಕ ಘೋಷಣೆ

Leave a Reply

Your email address will not be published. Required fields are marked *