ಜೀವನ ಪೂರ್ತಿ ಮುಗ್ಧತೆ ಕಾಪಾಡಿಕೊಳ್ಳುತ್ತೇನೆ ಎಂದ Yuva Rajkumar

ಯುವ ರಾಜಕುಮಾರ್ (Yuva Rajkumar) ಅಭಿನಯದ ಎರಡನೇ ಚಿತ್ರ ‘ಎಕ್ಕ’ (Ekka) ಕಳೆದ ಬಾರಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಇತ್ತೀಚೆಗೆ ಚಿತ್ರತಂಡ ಸಂತೋಷ ಕೂಟ ಆಯೋಜಿಸಿತ್ತು. ಈ ಗೆಲುವು ಬರೀ ಚಿತ್ರತಂಡದ ಗೆಲುವಲ್ಲ, ಇಡೀ ಚಿತ್ರರಂಗದ ಗೆಲುವು ಎಂದು ಚಿತ್ರತಂಡ ಸಂಭ್ರಮಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಯುವ ರಾಜಕುಮಾರ್, ‘ಮುತ್ತು ಎಂಬ ಹುಡುಗ ತನ್ನ ಕುಟುಂಬಕ್ಕೋಸ್ಕರ ಊರು ಬಿಡುತ್ತಾನೆ. ತನ್ನ ಕುಟುಂಬ ಸಾಕಬೇಕು ಎಂದು ಸಾಕಷ್ಟು ಕಷ್ಟಪಡುತ್ತಾನೆ. ದುಡಿದು ದೊಡ್ಡದಾಗಿ ಬೆಳೆಯುತ್ತಾನೆ. ಎಷ್ಟೇ ಬೆಳೆದರೂ ಮಗುವಾಗೇ ಇರುತ್ತಾನೆ. ಇದು ‘ಎಕ್ಕ’ ಚಿತ್ರದ ಕಥೆಯಲ್ಲ, ನಮ್ಮ ತಾತನ ಕಥೆ. ಒಳ್ಳೆಯ ಉದ್ದೇಶ ಇದ್ದಾಗ, ಒಳ್ಳೆಯವರು ಇರುತ್ತಾರೆ ಎಂಬ ಮಾತಿದೆ. ಅದೇ ತರಹ ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾವೆಲ್ಲಾ ಸೇರಿದ್ದೇವೆ. ‘ಎಕ್ಕ’ ಚಿತ್ರದ ವಿಶೇಷತೆ ಏನು ಎಂದರೆ, ಇಡೀ ಚಿತ್ರರಂಗಕ್ಕೆ ಈ ಚಿತ್ರ ಗೆಲ್ಲಬೇಕು ಎಂಬ ಆಸೆ ಇತ್ತು. ಇದು ಬರೀ ನಮ್ಮೊಬ್ಬರ ಸಿನಿಮಾ ಅಲ್ಲ, ಪ್ರತಿಯೊಬ್ಬರ ಸಿನಿಮಾ ಇದು. ‘ಎಕ್ಕ’ ಚಿತ್ರ ಗೆದ್ದರೆ, ಚಿತ್ರರಂಗ ಗೆದ್ದಿತು, ಒಳ್ಳೆಯ ಚಿತ್ರ ಗೆದ್ದಿತು ಎಂದರ್ಥ’ ಎಂದು ಯುವ ಹೇಳಿದರು.
ಒಳ್ಳೆಯ ಸಿನಿಮಾ ಕೊಟ್ಟರೆ ಜನ ಖಂಡಿತಾ ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವ ಯುವ, ‘ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಅಂತ ಹೇಳುತ್ತಲೇ ಇರುತ್ತಾರೆ. ಒಳ್ಳೆಯ ಸಿನಿಮಾ ಮಾಡಿದರೆ, ಜನ ಬರುತ್ತಾರೆ ಎಂದು ಗೊತ್ತಿತ್ತು. ಒಳ್ಳೆಯ ಸಿನಿಮಾ ಮಾಡಿದ್ದೇವೆ, ಜನ ಬಂದಿದ್ದಾರೆ, ಆಶೀರ್ವಾದ ಮಾಡಿದ್ದಾರೆ. ಇದನ್ನು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಎಂಟು ತಿಂಗಳಲ್ಲಿ ಬರುತ್ತೇವೆ ಎಂದು ಮೊದಲೇ ಹೇಳಿದ್ದೆವು. ಇವತ್ತು ಚಿತ್ರವನ್ನು ಎಲ್ಲರೂ ಪ್ರೀತಿಸಿದ್ದಾರೆ. ಮತ್ತೆ ಎಂಟು ತಿಂಗಳಲ್ಲಿ ಇನ್ನೊಂದು ಚಿತ್ರದ ಮೂಲಕ ಬರುತ್ತೇವೆ, ನಿಮ್ಮೆಲ್ಲರನ್ನೂ ರಂಜಿಸುತ್ತೇವೆ ಮುಗ್ಧತೆಯ ಸಂಭ್ರಮ ಎಂದು ಇಲ್ಲಿ ಹಾಕಿದ್ದಾರೆ. ಜೀವನ ಪೂರ್ತಿ ಮುಗ್ಧತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದರು.

ರೋಹಿತ್ ಪದಕಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯುವಗೆ ಸಂಜನಾ ಆನಂದ್ ಮತ್ತು ಸಂಪದ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಈ ಚಿತ್ರವನ್ನು PRK ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ ಫಿಲಂಸ್ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ಮತ್ತು KRG ಸ್ಟುಡಿಯೋಸ್ ಅಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
ಈ ಸಮಾರಂಭದಲ್ಲಿ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು. ಹಿರಿಯ ನಟ ಬಿರಾದಾರ್ ಜೊತೆಗೆ ಯುವ, ‘ಬ್ಯಾಂಗಲ್ ಬಂಗಾರಿ …’ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
[…] […]
[…] […]
https://the.hosting/it/help/zen-kernel
[…] ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ … […]
https://ufo.hosting/cms-hosting/hosting-cms-modx