Yuddhakaanda Kannada Movie; ನನ್ನ ‘ಮಂಜಿನ ಹನಿ’ ಚಿತ್ರವನ್ನು ಕಾಪಿ ಮಾಡಿದ್ದಾರೆ ಅಂತ ಅನಿಸುತ್ತೆ; ‘ಯುದ್ಧಕಾಂಡ’ದ ಬಗ್ಗೆ ರವಿಚಂದ್ರನ್‍

ರವಿಚಂದ್ರನ್‍ (V Ravichandran) ಅವರ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು ‘ಮಂಜಿನ ಹನಿ’ (Manjina Hani). ಕೆಲವು ವರ್ಷಗಳ ಹಿಂದೆ ಈ ಚಿತ್ರ ಶುರು ಮಾಡಿದ್ದ ರವಿಚಂದ್ರನ್, ಕಾರಣಾಂತರಗಳಿಂದ ಚಿತ್ರವನ್ನು ಮುಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಅಜೇಯ್‍ ರಾವ್‍ (Krishna Ajai Rao) ಅಭಿನಯದ ಮತ್ತು ನಿರ್ದೇಶನದ ‘ಯುದ್ಧಕಾಂಡ’ ಚಿತ್ರವನ್ನು ನೋಡಿ ಅವರಿಗೆ ತಮ್ಮ ‘ಮಂಜಿನ ಹನಿ’ ನೆನಪಾಗಿದೆ.

ಇತ್ತೀಚೆಗೆ ‘ಯುದ್ಧಕಾಂಡ’ (Yuddhakaanda) ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿರುವ ರವಿಚಂದ್ರನ್‍, ‘ಅದರಲ್ಲೂ ಹೆಣ್ಣಿನ ಕೂಗಿದೆ. ಮಗುವಿನ ಆಕ್ರಂದನವಿದೆ. ಅದನ್ನು ನೋಡಿ ಕಾಪಿ ಹೊಡೆದಿದ್ದೀಯ ಅಂತನಿಸಿತು. ಆದರೆ, ಆ ಚಿತ್ರವನ್ನು ನನಗೆ ಕಾರಣಾಂತರಗಳಿಂದ ಮುಗಿಸೋಕೆ ಸಾಧ್ಯವಾಗಲಿಲ್ಲ’ ಎಂದರು.

‘ಯುದ್ಧಕಾಂಡ’ ಚಿತ್ರವನ್ನು ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ ಎಂದ ರವಿಚಂದ್ರನ್, ‘ಈಗಲೇ ಐದು ಗೋಲ್ಡ್ ಕ್ಲಾಸ್‍ ಟಿಕೆಟ್ ತೆಗೆದುಕೊಳ್ಳುತ್ತೇನೆ. ಸಿನಿಮಾ ನೋಡಿ ಫೋನ್‍ ಮಾಡುತ್ತೇನೆ’ ಎಂದು ತಕ್ಷಣವೇ ಜೇಬಿನಿಂದ ದುಡ್ಡು ತೆಗೆದು ಅಜೇಯ್‍ಗೆ ಕೊಟ್ಟು, ಚಿತ್ರದ ಮೊದಲ ಐದು ಟಿಕೆಟ್‌ಗಳನ್ನು ಖರೀದಿಸಿದರು.

ಇನ್ನು, ಅಜೇಯ್‍ ರಾವ್‍ ಚಿತ್ರಕ್ಕೆ ಸಾಲ ಮಾಡಿದ್ದರ ಕುರಿತು ಪ್ರಸ್ತಾಪಿಸಿದ ಅವರು, ‘ಅಜೇಯ್‍ ಕೆಲವು ಸಂದರ್ಶನಗಳಲ್ಲಿ ಸಾಲ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದನ್ನು ಕೇಳಿ ನನಗೆ ನನ್ನ ಸಾಲದ ನೆನಪಾಯಿತು. ಇಲ್ಲಿ ಸಾಲ ಮಾಡುವುದಕ್ಕೆ ತಾಕತ್ತು ಬೇಡ. ಸಾಲ ತೀರಿಸುವ ತಾಕತ್ತು ಬೇಕು. ನಾನು ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ. ಈಗಲೂ ಗೊತ್ತಿಲ್ಲ. ದುಡ್ಡಿಲ್ಲದಿದ್ದರೂ ಇಲ್ಲಿ ಕನಸು ಮುಖ್ಯ. ಎಷ್ಟು ದುಡ್ಡಿದೆಯೋ, ಅಷ್ಟರಲ್ಲಿ ಸಿನಿಮಾ ಮಾಡುವುದನ್ನು ಕಲಿಯಬೇಕು. ಇಲ್ಲಿ ಕಂಟೆಂಟ್ ಮುಖ್ಯ, ಏನು ಹೇಳುತ್ತಿದ್ದೀವಿ ಅನ್ನೋದು ಮುಖ್ಯ’ ಎಂದರು.

‘ಯುದ್ಧಕಾಂಡ’ ಚಿತ್ರಕ್ಕೆ ಪವನ್‍ ಭಟ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಜೇಯ್‍ ರಾವ್‍, ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್‍. ನಾಗಾಭರಣ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಏಪ್ರಿಲ್‍ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.



ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. […] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍ […]

  2. […] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]

  3. […] ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್‍ ಆಗಿ ಬಿಡುಗಡೆ […]

2 thoughts on “Yuddhakaanda Kannada Movie; ನನ್ನ ‘ಮಂಜಿನ ಹನಿ’ ಚಿತ್ರವನ್ನು ಕಾಪಿ ಮಾಡಿದ್ದಾರೆ ಅಂತ ಅನಿಸುತ್ತೆ; ‘ಯುದ್ಧಕಾಂಡ’ದ ಬಗ್ಗೆ ರವಿಚಂದ್ರನ್‍

Leave a Reply

Your email address will not be published. Required fields are marked *