Yash Toxic; ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಟಾಕ್ಸಿಕ್‌ ಚಿತ್ರೀಕರಣ; ಯಶ್‌ ಹೊಸ ದಾಖಲೆ..!

Yash Toxic

ಯಶ್‌ (Yash) ನಟನೆಯ ಟಾಕ್ಸಿಕ್‌ (Toxic) ಚಿತ್ರ ಏಕಕಾಲದಲ್ಲಿ ಇಂಗ್ಲೀಷ್‌ ಮತ್ತು ಕನ್ನಡದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಈ ಮೂಲಕ ಎರಡು ಭಾಷೆಗಳಲ್ಲಿ ಒಟ್ಟಿಗೇ ಚಿತ್ರೀಕರಣವಾಗುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಂದಿಯ “ಗೈಡ್” (1965), “ಶಾಲಿಮಾರ್” (1978), ಮಲೆಯಾಳಂನ “ನಥಿಂಗ್ ಬಟ್ ಲೈಫ್” (2004) ಮತ್ತು ಕನ್ನಡದ “ಸಮ್ಮರ್ ಹಾಲಿಡೇಸ್” ಚಿತ್ರಗಳು ಇಂಗ್ಲಿಷ್‌ ಜೊತೆಗೆ ಆಯಾ ಭಾಷೆಯಲ್ಲಿ ಚಿತ್ರೀರಣಗೊಂಡಿತ್ತು. ಆದರೆ ಯಶ್‌ ಅಭಿನಯದ ಟಾಕ್ಸಿಕ್‌ ಈಗ ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಮಾಡುತ್ತಿರುವುದರಿಂದ ದಾಖಲೆಯಾಗಿದೆ.

ಕೆವಿಎನ್‌ ಪ್ರೊಡಕ್ಷನ್ಸ್‌ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಅಡಿಯಲ್ಲಿ ‘ಟಾಕ್ಸಿಕ್‌–A fairy tale for grown-ups’ನಿರ್ಮಾಣವಾಗುತ್ತಿದೆ. ಗೀತು ಮೋಹನ್‌ದಾಸ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡ ‘ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರದ ಪರಿಕಲ್ಪನೆ, ಬರಹ ಮತ್ತು ಚಿತ್ರೀಕರಣ ನಡೆಯುತ್ತಿರುವುದು ಇದೇ ಮೊದಲು’ ಎಂದು ಚಿತ್ರ ತಂಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಕನ್ನಡ, ಇಂಗ್ಲಿಷ್‌ ಮಾತ್ರವಲ್ಲದೆ ಟಾಕ್ಸಿಕ್‌ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಗಳಲ್ಲೂ ಡಬ್‌ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆಯಾಗುವ ಅಧಿಕೃತ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ. ಯಶ್‌ ಜನ್ಮದಿನದಂದು ಚಿತ್ರದ ಗ್ಲಿಮ್ಸ್‌ ಬಿಡುಗಡೆಯಾಗಿದ್ದು, ರೆಟ್ರೋ ಶೈಲಿಯಲ್ಲಿ ಚಿತ್ರದ ದೃಶ್ಯಗಳಿವೆ.

ಹಾಲಿವುಡ್‌ನ ಜೆ.ಜೆ.ಪೆರ್‍ರಿ ಈ ಚಿತ್ರದಲ್ಲಿ ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಡಿಎನ್‌ಇಜಿ ಸ್ಟುಡಿಯೊ ಚಿತ್ರದ ವಿಎಫ್‌ಎಕ್ಸ್‌ ಮಾಡುತ್ತಿದೆ. ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣ, ತಯಾರಿ ಹಾಗೂ ಶೂಟಿಂಗ್‌ ದಿನಗಳು ಹೆಚ್ಚಾಗುತ್ತಿವೆ ಎಂದಿದೆ ಚಿತ್ರತಂಡ.

Leave a Reply

Your email address will not be published. Required fields are marked *