Monalisa; ಶಿವಣ್ಣನ ಜೊತೆ ನಟಿಸುತ್ತಾಳಾ ಕುಂಭಮೇಳದ ಟ್ರೆಂಡ್ ಚೆಲುವೆ; ಮೋನಾಲಿಸಾಗೆ ಸೌಥ್‌ನಿಂದಲೂ ಬೇಡಿಕೆ

ಮೋನಾಲಿಸಾ (Monalisa) ಕುಂಭಮೇಳದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ಹೆಸರು. ಅವಳ ಖ್ಯಾತಿಯನ್ನು ಸಿನಿಮಾ ರಂಗ ಬಳಸಿಕೊಳ್ಳಲು ಮುಂದಾಗಿದೆ. ಬಾಲುವುಡ್‌ನಿಂದ ನಟನೆಗೆ ಆಫರ್ ಬಂದಿತ್ತು ಎಂಬ ಗಾಳಿ ಮಾತಿತ್ತು, ಈಗ ಕರುನಾಡ ಚರ್ಕವರ್ತಿ ಶಿವರಾಜ್ಕುಮಾರ್ ಅವರ ಅಭಿನಯದ ಸಿನಿಮಾದಲ್ಲಿ ಈಕೆ ನಟಿಸುತ್ತಾಳೆ ಎಂಬ ಮಾತು ಕೇಳಿಬರುತ್ತಿದೆ. ಶಿವಣ್ಣನ ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳುತ್ತಾಳೆ ಎನ್ನುವ ಸುದ್ದಿ ಈಗ ಸಧ್ಯಕ್ಕೆ ಟ್ರೇಂಡಿಂಗ್‌ನಲ್ಲಿರುವುದು.
ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಧ್ಯ ಮಾರುಕಟ್ಟೆಯಲ್ಲಿರುವ ಸಿನಿಮಾ. ರಾಮ್ ಚರಣ್ ಅವರ 16ನೇ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈ ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಬೋಂಸ್ಲೆ ನಟಿಸುತ್ತಿದ್ದಾರೆ. ಬುಚ್ಚಿ ಬಾಬು ನಿರ್ದೇಶನದಲ್ಲಿ ಆರ್‌ಸಿ 16 ಚಿತ್ರದಲ್ಲಿ ರಾಮ್ ಚರಣ್ ನಾಯಕ ಮತ್ತು ಜಾನ್ವಿ ಕಪೂರ್ ಈಗಾಗಲೇ ನಾಯಕಿ. ಎ.ಆರ್. ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿರಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್, ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್ ಅಡಿ ನಿರ್ಮಾಣ ಆಗುತ್ತಿದೆ. ಕನ್ನಡದ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಮತ್ತು ಜಗಪತಿ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಗೇಮ್ ಚೇಂಜರ್ ನಂತರ ರಾಮಚರಣ್ ಬುಚ್ಚಿಬಾಬು ಜೊತೆ ಆರ್‌ಸಿ16 ಸಿನಿಮಾ ಮಾಡುತ್ತಿದ್ದಾರೆ. ಆರ್‌ಸಿ 16 ಪ್ಯಾನ್ ಇಂಡಿಯಾ ಸಿನಿಮಾ ಎಂದೂ ಹೇಳಲಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಇನ್ನು ಈ ಸಿನಿಮಾದಲ್ಲಿ ಮೋನಾಲಿಸಾ ಕಾಣಿಸಿಕೊಂಡರೆ ಮತ್ತಷ್ಟು ಹೈಪ್ ಸಿಗಲಿದೆ. RC 16 ಎರಡನೇ ಶೆಡ್ಯೂಲ್ ಜನವರಿ 27 ರಿಂದ ಪ್ರಾರಂಭ ಆಗಲಿದ್ದು, ಜುಲೈಗೆ ಸಂಪೂರ್ಣ ಚಿತ್ರೀಕರಣ ಮುಗಿಸಿ ದಸರಾಕ್ಕೆ ತೆರೆಗೆ ತರಲು ನಿರ್ಮಾಪಕರು ಚಿಂತಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮೋನಾಲಿಸಾ ಯಾರು?:-
ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದ ಹುಡುಗಿಯೇ ಈ ಮೋನಾಲಿಸಾ, ಈಗೆ ಕುಟುಂಬ ಸಮೇತ ಬಂದಿದ್ದಳು. ಈಕೆಯ ಕಣ್ಣುಗಳು ಮತ್ತು ಸೌಂದರ್ಯ ಕುಂಭಮೇಳಕ್ಕೆ ಬಂದ ಪ್ರವಾಸಿಗರನ್ನು ಆಕರ್ಷಿಸಿತು. ಮೋನಾಲಿಸಾ ಜೊತೆಗೆ ಫೋಟೋ ತೆಗೆಸಿಕೊಂಡು, ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳನ್ನು ಹಲವರು ಹಂಚಿದ್ದಾರೆ. ರಾತ್ರೋರಾತ್ರಿ ಮೋನಾಲಿಸಾ ಟ್ರೆಂಡ್ ಆಗಿದ್ದಳು. ಇದಾದ ನಂತರ ಮಾಧ್ಯಮಗಳಲ್ಲೂ ಆಕೆಯ ಬಗ್ಗೆ ಸುದ್ದಿಗಳು ಹರಿದಾಡಿದವು. ಇಷ್ಟು ಟ್ರೆಂಡ್ ಆದ ಮೋನಾಲಿಸಾಗೆ ಬಾಲಿವುಡ್‌ನಿಂದ ಅವಕಾಶಗಳು ಕೇಳಿ ಬಂದಿತ್ತು ಎಂಬ ಸುದ್ದಿ ಹರಿದಾಡಿತ್ತು. ಸದ್ಯದಲ್ಲೇ ನಿರ್ದೇಶಕ ಸನೋಜ್ ಮಿಶ್ರಾ ಮೋನಾಲಿಸಾಳನ್ನು ಭೇಟಿ ಆಗುವುದಾಗಿ ಹೇಳಿದ್ದಾರೆ.