Vikram Ravichanrdran ಹುಟ್ಟುಹಬ್ಬಕ್ಕೆ ಹೊಸ ಸುದ್ದಿ …

ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್‍ ರವಿಚಂದ್ರನ್‍(Vikram Ravichandran) ಸುದ್ದಿಯೇ ಇರಲಿಲ್ಲ. ‘ಮುಧೋಳ್‍’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿರುವ ಸುದ್ದಿ ಇತ್ತು. ಅದರ ಜೊತೆಗೆ ಇತ್ತೀಚೆಗೆ ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆ ಘೋಷಿಸಿದ ಆರು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ವಿಕ್ರಮ್‍ ನಟಿಸುತ್ತಿರುವ ಸುದ್ದಿ ಇತ್ತು.

ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆಯ ವಿಜಯ್‍ ಟಾಟಾ, ವಿಕ್ರಮ್‍ ಅಭಿನಯದ ಹೊಸ ಚಿತ್ರವನ್ನು ನಿರ್ಮಸಿತ್ತಿಲ್ಲ. ಅದರ ಬದಲು ‘ಮುಧೋಳ್‍’ ಚಿತ್ರವನ್ನೇ ಮುಂದುವರೆಸುತ್ತಿದೆ. ‘ಮುಧೋಳ್‍’ ಚಿತ್ರ ಪ್ರಾರಂಭವಾಗಿ ಹಲವು ದಿನಗಳೇ ಆಗಿವೆ. ಆದರೆ, ಚಿತ್ರತಂಡದಿಂದ ಯಾವುದೇ ಅಪ್ಡೇಟ್‍ ಇರಲಿಲ್ಲ. ವಿಕ್ರಮ್‍ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ‘ಮುಧೋಳ್‍’ ಚಿತ್ರವನ್ನು ನಿರ್ಮಾಪಕ ವಿಜಯ್‍ ಟಾಟಾ ಮುಂದುವರೆಸುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

‘ಮುಧೋಳ್‍’ ಚಿತ್ರವನ್ನು ಇದಕ್ಕೂ ಮೊದಲು ರಕ್ಷಾ ಎನ್ನುವವರು ನಿರ್ಮಿಸುತ್ತಿದ್ದರು. ‘ಮುಧೋಳ್‍’ಗೂ ಮೊದಲು ಅವರು ವಿಕ್ರಮ್‍ ಸಹೋದರ ಮನೋರಂಜನ್‍ ರವಿಚಂದ್ರನ್‍ ಅಭಿನಯದ ‘ಮುಗಿಲ್ಪೇಟೆ’ ಚಿತ್ರವನ್ನು ನಿರ್ಮಿಸಿದ್ದರು. ಇದೀಗ ರಕ್ಷಾ ಜೊತೆಗೆ ಕೈಜೋಡಿಸಿರುವ ಅಮೃತಾ ಸಿನಿ ಕ್ರಾಫ್ಟ್ನ ವಿಜಯ್‍ ಟಾಟಾ ಚಿತ್ರವನ್ನು ಮುಂದುವರೆಸುತ್ತಿದೆ. ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸುವುದರ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಸೇರಿದಂತೆ ಬೇರೆ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಬಾಕಿ ಇರುವ ಚಿತ್ರವನ್ನು ಸದ್ಯದಲ್ಲೇ ಮುಗಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.

‘ಮುಧೋಳ್‍’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ಕಾರ್ತಿಕ್‍ ರಾಜನ್‍. ಚಿತ್ರದಲ್ಲಿ ವಿಕ್ರಮ್‍ ಎದುರು ಸಂಜನಾ ಆನಂದ್‍ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಯುವರಾಜ್‍ ಚಂದ್ರನ್‍ ಸಂಗೀತ ಸಂಯೋಜಿಸುತ್ತಿದ್ದು, ಸಂದೀಪ್‍ ವಳ್ಳೂರಿ ಛಾಯಾಗ್ರಹಣ ಮಾಡುತ್ತಿದ್ದಾರೆ.



52 thoughts on “Vikram Ravichanrdran ಹುಟ್ಟುಹಬ್ಬಕ್ಕೆ ಹೊಸ ಸುದ್ದಿ …

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!