Jana Nayagan; ಮುಂದಿನ ಸಂಕ್ರಾಂತಿಗೆ ಬರಲಿದ್ದಾನೆ ಜನ ನಾಯಗನ್; KVN ನಿರ್ಮಾಣದ ಮೊಲದ ತಮಿಳು ಚಿತ್ರ

ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ KVN ಪ್ರೊಡಕ್ಷನ್ಸ್, ಕನ್ನಡದಲ್ಲಿ ‘ಕೆಡಿ – ದಿ ಡೆವಿಲ್’ ಚಿತ್ರವನ್ನು ನಿರ್ಮಿಸುತ್ತಿದೆ. ಅದರ ಜೊತೆಗೆ ತಮಿಳಿನಲ್ಲಿ ವಿಜಯ್ (Thalapathy Vijay) ಅಭಿನಯದ ‘ಜನ ನಾಯಗನ್’ (Jana Nayagan) ಚಿತ್ರವನ್ನೂ ನಿರ್ಮಿಸುತ್ತಿದೆ. ‘ಕೆಡಿ – ದಿ ಡೆವಿಲ್’ (KD Devil) ಬಿಡುಗಡೆ ಯಾವಾಗಲೋ ಗೊತ್ತಿಲ್ಲ. ಆದರೆ, ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು 2026ರ ಸಂಕ್ರಾಂತಿ ಪ್ರಯುಕ್ತ ಜನವರಿ 09ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದಾರೆ. ತಮ್ಮದೇ ಹೊಸ ಪಕ್ಷ (Tamilaga Vettri Kazhagam) ಸ್ಥಾಪಿಸಿಕೊಂಡು ರಾಜಕೀಯಕ್ಕೆ ಧುಮುಕಿದ್ದಾರೆ. ಈಗ ನಟಿಸುತ್ತಿರುವ ‘ಜನ ನಾಯಗನ್’ ಅವರ ಕೊನೆಯ ಚಿತ್ರವಾಗಲಿದ್ದು, ಆ ನಂತರ ಅವರು ರಾಜಕೀಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ತಮಿಳು ನಾಡಿನಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಲಿದ್ದು, ಆ ಚುನಾವಣೆಗಳಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತಿದೆ.
ಇದಕ್ಕೂ ಮುನ್ನ ಸಂಕ್ರಾಮತಿ ಹಬ್ಬದ ಸಂದರ್ಭದಲ್ಲಿ ವಿಜಯ್ ಅಭಿನಯದ ‘ವಾರಿಸು’, ‘ಮಾಸ್ಟರ್’, ‘ಭೈರವ’ ಮುಂತಾದ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ‘ಮಾಸ್ಟರ್’ ಚಿತ್ರವು ದೊಡ್ಡ ಹಿಟ್ ಆಗಿತ್ತು. ಸಂಕ್ರಾಂತಿ ಹಬ್ಬದ ಸೀಸನ್ ಆದ್ದರಿಂದ, ಈ ಸಂದರ್ಭದಲ್ಲಿ ‘ಜನ ನಾಯಗನ್’ ಚಿತ್ರವನ್ನು ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆ.
‘ಜನ ನಾಯಗನ್’ ಎಂಬ ಹೆಸರೇ ಹೇಳುವಂತೆ ಇದೊಬ್ಬ ಜನನಾಯಕನ ಕಥೆಯಾಗಿದ್ದು, ವಿಜಯ್ ರಾಜಕೀಯ ಪ್ರವೇಶಿಸಿರುವುದರಿಂದ, ಈ ಸಂದರ್ಭದಲ್ಲಿ ಅವರಿಗೆ ದೊಡ್ಡ ಪ್ಲಸ್ ಆಗುತ್ತದೆ ಎಂಬ ನಂಬಿಕೆ ವಿಜಯ್ ಅಭಿಮಾನಿಗಳಿಗಿದೆ. ಇದು ಅವರ ಕೊನೆಯ ಚಿತ್ರವಾದ್ದರಿಂದ, ಸಹಜವಾಗಿಯೇ ಚಿತ್ರದ ಕುರಿತು ಸಾಕಷ್ಟು ಹೈಪ್ ಇದೆ.
‘ಜನ ನಾಯಗನ್’ ಚಿತ್ರಕ್ಕೆ ಎಚ್. ವಿನೋದ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ವಿಜಯ್ ಜೊತೆಗೆ, ಪೂಜಾ ಹೆಗ್ಡೆ, ಬಾಬ್ಬಿ ಡಿಯೋಲ್, ಗೌತಮ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ, ಶ್ರುತಿ ಹಾಸನ್, ರೆಬಾ ಮೊನಿಕಾ ಜಾನ್, ವರಲಕ್ಷ್ಮೀ ಶರತ್ ಕುಮಾರ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದೆ. ಈ ಚಿತ್ರವನ್ನು ಕೆ. ವೆಂಕಟ್ ನಾರಾಯಣ್ ನಿರ್ಮಿಸುತ್ತಿದ್ದಾರೆ.
(“Jana Nayagan” is an upcoming Tamil-language political action thriller directed by H. Vinoth and produced by KVN Productions. The film stars Vijay in the lead role, portraying a character depicted as a “torchbearer of democracy,” reflecting his recent political endeavors, including the establishment of his political party, Tamilaga Vettri Kazhagam (TVK).
The ensemble cast includes Pooja Hegde, Bobby Deol, Gautham Vasudev Menon, Priyamani, and Prakash Raj in pivotal roles. Music is composed by Anirudh Ravichander, with cinematography by Sathyan Sooryan and editing by Pradeep E. Ragav.
Principal photography commenced in October 2024 in Chennai, with subsequent schedules in Payanoor. The film is scheduled for a theatrical release on January 9, 2026, coinciding with the Pongal festival.)
2 thoughts on “Jana Nayagan; ಮುಂದಿನ ಸಂಕ್ರಾಂತಿಗೆ ಬರಲಿದ್ದಾನೆ ಜನ ನಾಯಗನ್; KVN ನಿರ್ಮಾಣದ ಮೊಲದ ತಮಿಳು ಚಿತ್ರ”