Vidyapati; ಧನಂಜಯ್, ನಮ್ಮ ಪೀಳಿಗೆಯ ರವಿಚಂದ್ರನ್ ಎಂದ ಧ್ರುವ ಸರ್ಜಾ

‘ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಧನಂಜಯ್, ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ನಮ್ಮ ಪೀಳಿಗೆಯ ರವಿಚಂದ್ರನ್ ಅವರು. ಹೊಸಬರನ್ನು ಮುಂದಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಸು ಮತ್ತು ವ್ಯಕ್ತಿತ್ವ ಇರುವ ವ್ಯಕ್ತಿ. ಅವರಿಗೆ ಒಳ್ಳೆಯದಾಗುತ್ತದೆ. ಏಕೆಂದರೆ, ಅವರು ಎಲ್ಲೂ ಕೃತಕವಾಗಿಲ್ಲ, ರಿಯಲ್ ಆಗಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು …’
ಹಾಗಂತ ಹೇಳಿದ್ದು ಧ್ರುವ ಸರ್ಜಾ (Dhruva Sarja). ಧನಂಜಯ್ (Dali Dhananjaya) ನಿರ್ಮಿಸಿ, ನಾಗಭೂಷಣ್ (Nagabhushana) ಅಭಿನಯಿಸಿರುವ ‘ವಿದ್ಯಾಪತಿ’ ಚಿತ್ರವು ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಧ್ರುವ ಸರ್ಜಾ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
“‘ವಿದ್ಯಾಪತಿ’ ಫ್ಯಾಮಿಲಿ ನೋಡುವ ಸಿನಿಮಾ”
ಈ ಚಿತ್ರದ ಕುರಿತು ಮಾತನಾಡುವ ಧನಂಜಯ್, ‘ವಿದ್ಯಾಪತಿ’ (Vidyapati) ಫ್ಯಾಮಿಲಿ ನೋಡುವ ಸಿನಿಮಾ. ಕುಟುಂಬ ಸಮೇತರಾಗಿ ಮಕ್ಕಳ ಜೊತೆ ಬಂದು ಎಲ್ಲರೂ ಚಿತ್ರ ನೋಡಬಹುದು. ಪ್ರೇಕ್ಷಕರು ಕೈ ಹಿಡಿಯುವುದು ಮುಖ್ಯ. ಅವರ ಪ್ರೀತಿ ಯಾವಾಗಲೂ ಇರಲಿ. ಧ್ರುವ ಮೊದಲ ಸಿನಿಮಾದಿಂದಲೇ ಸೂಪರ್ ಸ್ಟಾರ್. ‘ಪೊಗರು’ ಚಿತ್ರದಲ್ಲಿ ಜೊತೆಯಲ್ಲಿ ಕೆಲಸ ಮಾಡಿದ್ದೆ. ಕೆಆರ್‌ಜಿ ಸ್ನೇಹಿತರಾಗಿ ಸದಾ ನನ್ನ ಜೊತೆ ನಿಂತಿದ್ದಾರೆ’ ಎಂದು ತಿಳಿಸಿದರು.
ಇದು ನನಗೆ ಜೀವನದಲ್ಲಿ ಸಿಕ್ಕ ಬೋನಸ್:-
ನಟ ನಾಗಭೂಷಣ್ ಮಾತನಾಡಿ, ‘ನಾನು ಚಿತ್ರರಂಗಕ್ಕೆ ಹೀರೋ ಆಗಬೇಕು ಎಂದು ಬಂದವನು ಅಲ್ಲ. ಒಳ್ಳೆಯ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಹೋಗಬೇಕು ಎಂದುಕೊಂಡಿದ್ದೆ. ಇದು ನನಗೆ ಜೀವನದಲ್ಲಿ ಸಿಕ್ಕ ಬೋನಸ್. ನನ್ನ ನಂಬಿ ನಿರ್ದೇಶಕರು ‘ವಿದ್ಯಾಪತಿ’ ಚಿತ್ರ ಕೊಟ್ಟರು. ಇಡೀ ತಂಡ ನನಗೆ ಬೆಂಬಲವಾಗಿ ನಿಂತಿದೆ. ನೀವು ಡಾಲಿ ಪಿಕ್ಚರ್ಸ್ ಬಿಟ್ಟು ಬೇರೆ ಕಡೆ ಸಿನಿಮಾ ಮಾಡೋಲ್ವಾ? ಎಂದು ಕೆಲವರು ಕೇಳುತ್ತಾರೆ. ಆದರೆ, ನನಗೆ ಸಿನಿಮಾ ಮಾಡುವ ಎಂದು ಯಾರು ಬಂದಿದ್ದಾರೆ? ನಿನ್ನ ಮೇಲೆ ಐದಾರು ಕೋಟಿ ಇನ್ವೆಸ್ಟ್ ಮಾಡುತ್ತೇನೆ ಎಂದು ಯಾರು ಹೇಳಿಲ್ಲ. ಅದನ್ನು ನನ್ನ ಗೆಳೆಯ ಧನಂಜಯ್ ಮಾಡಿದ್ದಾನೆ’ ಎಂದು ಭಾವುಕರಾದರು.

‘ವಿದ್ಯಾಪತಿ’ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ಈ ಚಿತ್ರಕ್ಕಿದೆ.

Harshika Poonacha directorial debut Chi: Soujanya; ನಿರ್ದೇಶನಕ್ಕಿಳಿದ ಹರ್ಷಿಕಾ ಪೂಣಚ್ಚ; ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಚಿ: ಸೌಜನ್ಯ: Vidyapati; ಧನಂಜಯ್, ನಮ್ಮ ಪೀಳಿಗೆಯ ರವಿಚಂದ್ರನ್ ಎಂದ ಧ್ರುವ ಸರ್ಜಾ