ಹೀರೋ ಆಗಲು ಉಪೇಂದ್ರರ ಮಗ ಆಯುಷ್‍ ರೆಡಿ; ಮಂತ್ರಾಲಯದಲ್ಲಿ ಸ್ಕ್ರಿಪ್ಟ್ ಪೂಜೆ

ಹೀರೋಗಳ ಮಕ್ಕಳು ಚಿತ್ರರಂಗದಲ್ಲೂ ಹೀರೋಗಳಾಗಿ ಗುರುತಿಸಿಕೊಳ್ಳುವುದು ಹೊಸ ವಿಷಯವೇನಲ್ಲ. Ambareesh ಮಗ Abhishek Ambareesh, ರಾಮ್‍ಕುಮಾರ್‍ ಮಗ ಧೀರೇನ್‍ ರಾಮ್‍ಕುಮಾರ್, ದೇವರಾಜ್‍ ಮಕ್ಕಳಾದ ಪ್ರಜ್ವಲ್‍ ಮತ್ತು ಪ್ರಣಂ ಚಿತ್ರರಂಗದಲ್ಲಿ ಈಗಾಗಲೇ ಹೀರೋಗಳಾಗಿ ಗುರುತಿಸಿಕೊಂಡಿದ್ದಾರೆ.

ಈಗ Upendra ಮಗ ಆಯುಷ್‍ ಸರದಿ. ಆಯುಷ್‍ ಒಂದಲ್ಲ ಒಂದು ದಿನ ಹೀರೋ ಆಗುತ್ತಾರೆ ಎಂಬುದು ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಗೊತ್ತಿತ್ತು. ಎರಡು ವರ್ಷಗಳ ಹಿಂದೆ ಮಗ ಹೀರೋ ಆಗುವುದು ಯಾವಾಗ? ಎಂಬ ಪ್ರಶ್ನೆಗೆ, ‘ಅದನ್ನೆಲ್ಲಾ ನಾವು ಪ್ಲಾನ್‍ ಮಾಡುವುದಲ್ಲ, ಅದಕ್ಕೆ ಕಾಲ ಕೂಡಿಬರಬೇಕು’ ಎಂದು ಉಪೇಂದ್ರ ಹೇಳಿದ್ದರು. ಆ ಕಾಲ ಈಗ ಕೂಡಿ ಬಂದಿದೆ.

ಉಪೇಂದ್ರರ ಮಗ ಆಯುಷ್‍ ಸದ್ಯದಲ್ಲೇ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ ಆಯುಷ್‍ ತಮ್ಮ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಪೇಂದ್ರ ಅವರ ಕುಟುಂಬ ಮಂತ್ರಾಲಕ್ಕೆ ತೆರಳಿ ರಾಯರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದೆ. ಆಗಲೇ ಆಯುಷ್‍ ಅಭಿನಯದ ಮೊದಲ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ನಡೆದಿದೆ ಎಂದು ಹೇಳಲಾಗುತ್ತದೆ.

ಆಯುಷ್‍ ಮೊದಲ ಚಿತ್ರವನ್ನು ಪುರುಷೋತ್ತಮ್‍ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್‍ ಸಿರಿವಂತ್‍ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಹಿರಿಯ ಛಾಯಾಗ್ರಾಹಕ ಎಚ್‍.ಸಿ. ವೇಣು ಮಾತ್ರ ಚಿತ್ರತಂಡ ಸೇರಿಕೊಂಡಿದ್ದು, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಳಗವನ್ನು ಅಧಿಕೃತವಾಗಿ ಘೋಷಿಸಲಾಗುತ್ತದಂತೆ. ಚಿತ್ರದ ಫೋಟೋಶೂಟ್‍ ಸದ್ಯದಲ್ಲೇ ನಡೆಯಲಿದ್ದು, ಆ ನಂತರ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದಂತೆ.

ದರ್ಶನದ ನಂತರ ಖಾಸಗೀ ಹೋಟೆಲ್‍ನಲ್ಲಿ ಆಯುಷ್‍ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಮುಂತಾದವರು ಆಯುಷ್‍ಗೆ ಕೇಕ್‍ ತಿನ್ನಿಸಿ, ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “ಹೀರೋ ಆಗಲು ಉಪೇಂದ್ರರ ಮಗ ಆಯುಷ್‍ ರೆಡಿ; ಮಂತ್ರಾಲಯದಲ್ಲಿ ಸ್ಕ್ರಿಪ್ಟ್ ಪೂಜೆ

Leave a Reply

Your email address will not be published. Required fields are marked *