Upendra Upcoming Movie ;‘UI’ ನಂತರ ಇನ್ನೊಂದು ಚಿತ್ರದಲ್ಲಿ ಉಪೇಂದ್ರ; ಏ. 30ಕ್ಕೆ ಹೆಸರು ಘೋಷಣೆ


‘UI’ ಚಿತ್ರದ ನಂತರ ಉಪೇಂದ್ರ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಸೂರಪ್ಪ’ ಬಾಬು (Soorappa Babu) ನಿರ್ಮಾಣದ ಮತ್ತು ನಾಗಣ್ಣ (Naganna) ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದು, ಇತ್ತೀಚೆಗೆ ಅಧಿಕೃತ ಘೋಷಣೆಯಾಗಿದೆ. (Upendra Upcoming Movie)

ಉಪೇಂದ್ರ ಮತ್ತು ನಾಗಣ್ಣ ಅವರದ್ದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟ-ನಿರ್ದೇಶಕ ಜೋಡಿ. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಓಂಕಾರ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ ಜೋಡಿ ಮಾಡಿತ್ತು. ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ, ಕನಕದಾಸರ ಬಯೋಪಿಕ್‍ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಕೆಲವು ವರ್ಷಗಳ ಹಿಂದೆ ಕೇಳಿ ಬಂದರೂ ಕಾರಣಾಂತರಗಳಿಂದ ಸೆಟ್ಟೇರಲೇ ಇಲ್ಲ. ಈಗ ಉಪೇಂದ್ರ ಅಭಿನಯದಲ್ಲಿ ನಾಗಣ್ಣ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.

ಈಗ ಇಬ್ಬರನ್ನೂ ಜೊತೆಯಾಗಿಸುತ್ತಿದ್ದಾರೆ ನಿರ್ಮಾಪಕ ‘ಸೂರಪ್ಪ’ ಬಾಬು. ಇದಕ್ಕೂ ಮೊದಲು ಅವರು ದರ್ಶನ್‍ ಅಭಿನಯದಲ್ಲಿ ಒಂದು ಚಿತ್ರ ನಿರ್ಮಿಸಬೇಕಿತ್ತು. ಆದರೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಡಿ ದರ್ಶನ್‍ ಬಂಧನವಾದ್ದರಿಂದ ಆ ಚಿತ್ರ ಸಾಧ್ಯವಾಗಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ, ಬಾಬು ಅವರಿಗೆ ಅಡ್ವಾನ್ಸ್ ವಾಪಸ್ಸು ಮಾಡಿರುವುದಾಗಿ ದರ್ಶನ್‍ ಸಹ ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದರು.

ದರ್ಶನ್‍ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕಿಟ್ಟಿರುವ ಬಾಬು, ಇದೀಗ ಉಪೇಂದ್ರ ಅಭಿನಯದಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ವಿಶೇಷವೆಂದರೆ, ಉಪೇಂದ್ರ ಅವರನ್ನು‘ತರ್ಲೆ ನನ್ಮಗ’ ಚಿತ್ರದ ಮೂಲಕ ನಿರ್ದೇಶಕರನ್ನಾಗಿ ಪರಿಚಯಿಸಿದ್ದೇ ಅವರು. ಆ ನಂತರ ನಾಗಣ್ಣ ನಿರ್ದೇಶನದಲ್ಲಿ ‘ಸೂರಪ್ಪ’, ‘ಕೋಟಿಗೊಬ್ಬ’ ಮತ್ತು ‘ಬಂಧು-ಬಳಗ’ ಚಿತ್ರಗಳನ್ನು ಬಾಬು ನಿರ್ಮಿಸಿದ್ದರು. ಈಗ ಉಪೇಂದ್ರ ಮತ್ತು ನಾಗಣ್ಣ ಕಾಂಬಿನೇಷನ್‍ನ ಹೊಸ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.

ಈ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಏಪ್ರಿಲ್‍ 30ರಂದು ಅಕ್ಷಯ ತೃತೀಯ ಹಬ್ಬದಂದು ಆಗಲಿದೆ.



(After UI, there was much curiosity about which movie Upendra would act in next. That question has finally been answered. Upendra will be starring in a new film produced by Soorappa Babu and directed by Naganna, which was recently officially announced.

Upendra and Naganna are a popular actor-director duo in the Kannada film industry. They have previously worked together on films like Gauramma, Kutumba, Omkara, and Dubai Babu.

A few years ago, there were reports that senior director Naganna would direct a biopic on Kanakadasa with Upendra in the lead role. However, due to various reasons, the project did not materialize. Now, Naganna is directing a new film with Upendra.)

One thought on “Upendra Upcoming Movie ;‘UI’ ನಂತರ ಇನ್ನೊಂದು ಚಿತ್ರದಲ್ಲಿ ಉಪೇಂದ್ರ; ಏ. 30ಕ್ಕೆ ಹೆಸರು ಘೋಷಣೆ

Leave a Reply

Your email address will not be published. Required fields are marked *