45 Movie ; ಪರರಾಜ್ಯ ಪ್ರಚಾರಕ್ಕೆ ಹಾರಿದ ‘45’ ಚಿತ್ರತಂಡ

ಶಿವರಾಜಕುಮಾರ್ (Shivaraj Kumar), ಉಪೇಂದ್ರ (Upendra) ಮತ್ತು ರಾಜ್ ಬಿ. ಶೆಟ್ಟಿ (Raj B Shetty) ಜೊತೆಯಾಗಿ ನಟಿಸಿರುವ ‘45’ (45 Movie) ಚಿತ್ರದ ಟೀಸರ್‌, ಎರಡು ವಾರಗಳ ಹಿಂದೆ ಯುಗಾದಿ ಹಬ್ಬದ ದಿನ ಬಿಡುಗಡೆಯಾಗಿತ್ತು. ಈ ಟೀಸರ್‌ ಸಿಕ್ಕ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ, ಬೇರೆ ರಾಜ್ಯಗಳ ಜನರಿಗೆ ಥ್ಯಾಂಕ್ಸ್ ಹೇಳುವುದರ ಜೊತೆಗೆ, ಚಿತ್ರದ ಪ್ರಚಾರ ಮಾಡಲು ಸಜ್ಜಾಗಿದೆ.

ಇಂದು (ಏಪ್ರಿಲ್ 15ರ ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ಮುಂಬೈನ PVR Juhu ನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಚಿತ್ರತಂಡ, ಅಂದು ಸಂಜೆ 7 ಗಂಟೆಗೆ ಹೈದರಾಬಾದ್‍ನ ಬಂಜಾರ ಹಿಲ್ಸ್ ನಲ್ಲಿರುವ PVR Cineplexನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ. ಮರುದಿನ ಏಪ್ರಿಲ್ 16 ಬುಧವಾರ ಬೆಳಿಗ್ಗೆ 11ಗಂಟೆಗೆ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಅಂದು ಸಂಜೆ 7 ಗಂಟೆಗೆ ಕೇರಳದ ಕೊಚ್ಚಿ PVR Forumನಲ್ಲಿ ‘45’ ಚಿತ್ರದ ಪತ್ರಿಕಾಗೋಷ್ಠಿ ನಡೆಯಲಿದೆ.

ಈ ಪತ್ರಿಕಾಗೋಷ್ಠಿಗಳಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ, ನಿರ್ಮಾಪಕ ರಮೇಶ್‍ ರೆಡ್ಡಿ, ನಿರ್ದೇಶಕ ಅರ್ಜುನ್‍ ಜನ್ಯ ಮುಂತಾದವರು ಭಾಗವಹಿಸಿ, ಚಿತ್ರದ ಬಗ್ಗೆ ಮಾತನಾಡಲಿದ್ದಾರೆ.

ಸೂರಜ್‍ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್‍ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.

‘45’ ಚಿತ್ರದಲ್ಲಿ ಶೇ. 40ರಷ್ಟು ಗ್ರಾಫಿಕ್ಸ್ ಇರಲಿದ್ದು. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಇದು ಈ ಸಂಸ್ಥೆ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ ಮಾಡುತ್ತಿರುವ ಭಾರತದ ಮೊದಲ ಚಿತ್ರವಾಗಿದ್ದು, ಅದರಲ್ಲೂ ಕನ್ನಡದ ಚಿತ್ರವೊಂದರಿಂದ ಈ ಪಯಣ ಶುರುವಾಗಿದೆ ಎನ್ನುವುದು ವಿಶೇಷ. ಈ ಸಂಸ್ಥೆಯ ರಾಫೆಲ್ ಹಾಗೂ ಜಸ್ಟಿನ್ ಅವರ ನೇತೃತ್ವದಲ್ಲಿ ಗ್ರಾಫಿಕ್ಸ್ ಕಾರ್ಯ ನಡೆಯುತ್ತಿದೆ.

‘45’ ಚಿತ್ರವು ಆಗಸ್ಟ್ 15ರಂದು ಪ್ಯಾನ್‍ ಇಂಡಿಯಾ ಚಿತ್ರವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ.


ಓದು ಮುಂದುವರೆಸಿ:-

  1. Покуреха порошки безвкусные (на язык), остальные горькие. Так проще всего определить. https://www.band.us/page/99926443/ уже ожидается что нибудь?

One thought on “45 Movie ; ಪರರಾಜ್ಯ ಪ್ರಚಾರಕ್ಕೆ ಹಾರಿದ ‘45’ ಚಿತ್ರತಂಡ

Leave a Reply

Your email address will not be published. Required fields are marked *