ತಮಿಳಿನ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿದ Tanisha Kuppanda

‘Pen Drive’ ಎಂಬ ಚಿತ್ರದಲ್ಲಿ ನಟಿಸಿರುವ ತನಿಷಾ ಕುಪ್ಪಂಡ, ಆ ಚಿತ್ರದ ಬಿಡುಗಡೆಗೆ ಕಾದಿದ್ದಾರೆ. ಈ ಮಧ್ಯೆ, ಅವರು ಸದ್ದಿಲ್ಲದೆ ತಮಿಳಿನ ಚಿತ್ರವೊಂದರಲ್ಲಿ ನಟಿಸಿ ಬಂದಿದ್ದು, ಇನ್‍ಸ್ಟಾಗ್ರಾಂನಲ್ಲಿ ಅದರ ಮೇಕಿಂಗ್‍ ವೀಡಿಯೋ ಹಂಚಿಕೊಂಡಿದ್ದಾರೆ.

ಅಂದಹಾಗೆ, ತನಿಷಾ ಕುಪ್ಪಂಡ ನಟಿಸಿರುವ ತಮಿಳು ಚಿತ್ರದ ಹೆಸರು ‘ಎನ್ ಕಾದಲೇ’. ಈ ಚಿತ್ರದ ‘ರಾಸಾನಾ ಓತಾ ರೋಸಾ …’ ಎಂಬ ಐಟಂ ಸಾಂಗ್‍ನಲ್ಲಿ ತನಿಷಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆ ಆಗಿದೆ. ಈ ಹಾಡಿನ ಚಿತ್ರೀಕರಣದಲ್ಲಿ ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಅನ್ನು ತನಿಷಾ ಹಂಚಿಕೊಂಡಿದ್ದಾರೆ. ಈ ಹಾಡನ್ನು ನೋಡಿರುವ ಅಭಿಮಾನಿಗಳು, ‘ಬೆಂಕಿ ಡ್ಯಾನ್ಸ್’ ಎಂದು ಕೊಂಡಾಡಿದ್ದಾರೆ. 

ಕನ್ನಡದಲ್ಲಿ ‘ಪೆನ್‍ ಡ್ರೈವ್‍’ ಅಲ್ಲದೆ, ಕೋಮಲ್‍ ಅಭಿನಯದ ‘Kona’ ಎಂಬ ಚಿತ್ರದಲ್ಲಿ ನಟಿಸುವುದರ ಜೊತೆಗೆ, ಆ ಚಿತ್ರವನ್ನು ಸ್ನೇಹಿತರ ಜೊತೆಗೆ ಸೇರಿ ನಿರ್ಮಾಣ ಮಾಡಿದ್ದಾರೆ ತನಿಷಾ. ಆ ಚಿತ್ರದ ಪೋಸ್ಟರ್‍ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಅವರು, ‘ಮೊದಲು ಆಲ್ಬಂ ಸಾಂಗ್ ಮಾಡೋಣ ಎಂಬ ಯೋಚನೆ ಇತ್ತು. ಆ ಬಳಿಕ ಸಿನಿಮಾ ನಿರ್ಮಾಣಕ್ಕೂ ಕೈಹಾಕುವ ಆಸೆ ಇತ್ತು. ಎಲ್ಲಾ ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ’ ಎಂದು ಹೇಳಿದ್ದರು.

ಇದಕ್ಕೂ ಮುನ್ನ ‘ಬಿಗ್‍ ಬಾಸ್‍’ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನಿಷಾ, ಗುರು ದೇಶಪಾಂಡೆ ನಿರ್ಮಾನದ ‘ಪೆಂಟಗನ್‍’ ಚಿತ್ರದಲ್ಲೂ ನಟಿಸಿದ್ದರು.

ಇದನ್ನೂ ಓದಿ:-

ಹೆಚ್ಚಿನ ಓದಿಗೆ:-

2 thoughts on “ತಮಿಳಿನ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿದ Tanisha Kuppanda

Leave a Reply

Your email address will not be published. Required fields are marked *