
Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್
‘ಇದು ಇಲ್ಲಿಗೆ ಮುಗಿದಿಲ್ಲ. ನನಗೆ ತುಂಬಾ ತಾಳ್ಮೆ ಇದೆ. ಚಿತ್ರರಂಗದಲ್ಲಿ 25 ವರ್ಷ ಇಂಥದ್ದೊಂದು ಹಿಟ್‍ಗೆ ಕಾದಿದ್ದೇನೆ. ಇನ್ನೂ ಮುಂದೆ ಜನ ಬರುತ್ತಾರೆ, ಇಲ್ಲಿಗೇ ಎಲ್ಲಾ ಮುಗಿದಿಲ್ಲ ಎಂಬ ನಂಬಿಕೆ ಇದೆ …’ ಹಾಗೆ ಹೇಳಿದ್ದು ಅಜೇಯ್ ರಾವ್. ಅವರ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್ 18ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಾಳಜಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಗಳಿಕೆ ಓಹೋ ಎನ್ನುವಂತದ್ದೇನೂ ಇಲ್ಲ. ‘ಯುದ್ಧಕಾಂಡ’ 100 ದಿನ ಪ್ರದರ್ಶನ ಕಾಣುತ್ತದೆ…