
Toxic Teaser: ಟಾಕ್ಸಿಕ್ನ ಕ್ರೇಜಿ಼ ಲುಕ್ ರಿವೀಲ್; ಯಶ್ ಬರ್ತ್ಡೇಗೆ ಕೆವಿಎನ್ನಿಂದ ಮಸ್ತ ಗಿಫ್ಟ್
2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಝಲಕ್ ಬಿಡುಗಡೆಯಾಗಿದೆ. ಯಶ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಟಾಕ್ಸಿಕ್ ನಿರ್ಮಾಣ ಸಂಸ್ಥೆ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಬಿಡುಗಡೆ ಆದ ವಿಡಿಯೋದಲ್ಲಿ ಯಶ್ ಕಾರಿಂದ ಇಳಿದು ಪಬ್ಗೆ ಪ್ರವೇಶಿಸುತ್ತಾರೆ. ಇದನ್ನು ಗ್ಯಾಂಡ್ ಆಗಿ ಶೂಟ್ ಮಾಡಲಾಗಿದೆ. ಕೆಜಿಎಫ್ನಿಂದ ಯಶ್ನ ಮಾಸ್ ಹಾಗೇ ಕಂಟೀನ್ಯು ಆಗಿದೆ. ನೀಳವಾದ ಗಡ್ಡದಾರಿಯಾಗಿ ಸಿಗರೇಟ್ನ್ನು ಸ್ಟೈಲ್ ಆಗಿ ಸೇದುತ್ತಾ ಪಬ್ ಪ್ರವೇಶಿಸುವ ವಿಡಿಯೋ ಅಭಿಮಾನಿಗಳ ಶಿಳ್ಳೆ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ.