
ಒಂದು ರಾತ್ರಿ, ಒಂದು ಫೋನ್ ಕಾಲ್, ಒಂದು Wrong Turn …
ಒಂದು ರಾತ್ರಿಯಲ್ಲಿ ನಡೆಯುವ ಕಥೆಗಳು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗುತ್ತಿವೆ. ವಿಜಯ್ ರಾಘವೇಂದ್ರ ಅಭಿನಯದ ‘6 ಟು 6’ ನಂತರ ಆ ಸಾಲಿಗೆ ‘ವೃತ್ತ’ ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರವು ಇದೇ ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಒಂದು ರಾಂಗ್ ಟರ್ನ್(Wrong Turn) ತೆಗೆದುಕೊಂಡರೆ ಏನೆಲ್ಲಾ ಆಗಬಹುದು? ಎಂಬ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಈ ಚಿತ್ರಕ್ಕೆ ಯೋಗೇಶ್ ಗೌಡ ಕಥೆ ಬರೆದರೆ, ಲಿಖಿತ್ ಕುಮಾರ್ ಈ ಚಿತ್ರಕ್ಕೆ ಚಿತ್ರಕಥೆ…