
Vidyapati; ಧನಂಜಯ್, ನಮ್ಮ ಪೀಳಿಗೆಯ ರವಿಚಂದ್ರನ್ ಎಂದ ಧ್ರುವ ಸರ್ಜಾ
‘ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಧನಂಜಯ್, ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ನಮ್ಮ ಪೀಳಿಗೆಯ ರವಿಚಂದ್ರನ್ ಅವರು. ಹೊಸಬರನ್ನು ಮುಂದಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಸು ಮತ್ತು ವ್ಯಕ್ತಿತ್ವ ಇರುವ ವ್ಯಕ್ತಿ. ಅವರಿಗೆ ಒಳ್ಳೆಯದಾಗುತ್ತದೆ. ಏಕೆಂದರೆ, ಅವರು ಎಲ್ಲೂ ಕೃತಕವಾಗಿಲ್ಲ, ರಿಯಲ್ ಆಗಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು …’ ಹಾಗಂತ ಹೇಳಿದ್ದು ಧ್ರುವ ಸರ್ಜಾ (Dhruva Sarja). ಧನಂಜಯ್ (Dali Dhananjaya) ನಿರ್ಮಿಸಿ, ನಾಗಭೂಷಣ್ (Nagabhushana) ಅಭಿನಯಿಸಿರುವ ‘ವಿದ್ಯಾಪತಿ’ ಚಿತ್ರವು ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ….