
Dhanveer Gowda; ಮುನಿಸಿನ ನಡುವೆಯೇ ‘ವಾಮನ’ ಚಿತ್ರದ ತಾಯಿ – ಮಗನ ಬಾಂಧವ್ಯದ ಹಾಡು ಬಿಡುಗಡೆ
ಧನ್ವೀರ್ ಗೌಡ (Dhanveer Gowda) ಅಭಿನಯದ ‘ವಾಮನ’ ಚಿತ್ರವು ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾಗಬೇಕಿತ್ತು. ಕೆಲವೇ ದಿನಗಳಿರುವಾಗ ರದ್ದಾಗುವುದರ ಜೊತೆಗೆ, ಚಿತ್ರ ಇನ್ನು ಬಿಡುಗಡೆಯೇ ಆಗುವುದಿಲ್ಲ ಎಂಬ ಮಾತೊಂದು ಕೇಳಿ ಬಂದಿತ್ತು. ಅದಕ್ಕೆ ಕಾರಣ ಧನ್ವೀರ್ ಮತ್ತು ನಿರ್ಮಾಪಕ ಚೇತನ್ ಗೌಡ ನಡುವಿನ ಮುನಿಸು ಎಂದು ಹೇಳಲಾಗಿತ್ತು. ಹೀಗಿರುವಾಗಲೇ, ಏಪ್ರಿಲ್ 10ರಂದು ‘ವಾಮನ’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಚಿತ್ರವೇನೋ ಬಿಡುಗಡೆಗೆ ಸಜ್ಜಾಗಿದ್ದರೂ, ನಿರ್ಮಾಪಕರು ಮತ್ತು ಧನ್ವೀರ್ ನಡುವಿನ ಮುನಿಸು ಬಗೆಹರಿದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಚಿತ್ರದ…