
ಫೆಬ್ರವರಿ 7ಕ್ಕೆ ಬರಲಿದ್ದಾನೆ ‘ಅನ್ ಲಾಕ್ ರಾಘವ’
ರಿಯಾಗಿ ಎರಡೂವರೆ ವರ್ಷಗಳ ಹಿಂದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ‘ಅನ್ ಲಾಕ್ ರಾಘವ’ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಕಳೆದ ವರ್ಷವೇ ಚಿತ್ರದ ಚಿತ್ರೀಕರಣ ಮುಗಿದಿದ್ದರೂ, ಬಿಡುಗಡೆಯಾಗಿರಲಿಲ್ಲ. ಈಗ ಹೊಸ ವರ್ಷದಲ್ಲಿ ಬರುವುದಕ್ಕೆ ರಾಘವ ತಯಾರಿ ನಡೆಸಿದ್ದಾನೆ. ಚಿತ್ರವು ಫೆಬ್ರವರಿ 07ರಂದು ರಾಜ್ಯಾದ್ಯಂತ ಬಿಡುಡೆಯಾಗುತ್ತಿದೆ. ಮಿಲಿಂದ್ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ. ಇನ್ನು ‘ರಾಮ ರಾಮಾ…