The Devil

‘The Devil’ ಚಿತ್ರದ ಚಿತ್ರೀಕರಣ ಮುಕ್ತಾಯ; ಅ.31ಕ್ಕೆ ಚಿತ್ರ ಬಿಡುಗಡೆ?

ದರ್ಶನ್‍ ಅಭಿನಯದ ‘ದಿ ಡೆವಿಲ್‍’ (The devil) ಚಿತ್ರದ ಮಾತಿನ ಭಾಗದ ಚಿತ್ರೀಕರಣ ಕಳೆದ ತಿಂಗಳೇ ಮುಗಿದಿತ್ತು. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಇದೀಗ ಚಿತ್ರತಂಡವು ಇತ್ತೀಚೆಗೆ ಥಾಯ್ಲೆಂಡ್‍ನಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ ಮುಗಿಸಿದೆ. ಜೊತೆಗೆ ಡಬ್ಬಿಂಗ್‍ ಸಹ ಮುಗಿದಿದೆಯಂತೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಅಕ್ಟೋಬರ್ 31ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ‘ದಿ ಡೆವಿಲ್‍’ ಚಿತ್ರದ ಹಾಡುಗಳ ಚಿತ್ರೀಕರಣ ಈ ಮೊದಲೇ ಮುಗಿಯಬೇಕಿತ್ತು. ಆದರೆ, ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನ್ಯಾಯಾಲಯವು…

Read More

ಮುಗಿಯಿತು `The Devil’ ಚಿತ್ರದ ಮಾತಿನ ಭಾಗದ ಚಿತ್ರೀಕರಣ …

ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನ್ಯಾಯಾಲಯವು ದರ್ಶನ್‍ಗೆ ಕೆಲವೇ ದಿನಗಳ ಹಿಂದಷ್ಟೇ ಅನುಮತಿ ನೀಡಿದೆ. ಸದ್ಯದಲ್ಲೇ ದರ್ಶನ್‍ (Thoogudeepa Darshan) ವಿದೇಶಕ್ಕೆ ಹಾರಲಿದ್ದು, ‘ದಿ ಡೆವಿಲ್‍’ (The Devil) ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಮಧ್ಯೆ, ಚಿತ್ರತಂಡದಿಂದ ಸುದ್ದಿಯೊಂದು ಬಂದಿದ್ದು, ‘ದಿ ಡೆವಿಲ್‍’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆಯೇ ಶುರುವಾಗಿತ್ತು. ಆದರೆ, ಚಿತ್ರ ಯಾವ ಹಂತದಲ್ಲಿದೆ? ಎಷ್ಟು ಮುಗಿದಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ….

Read More