KGF Avinash; ಕನ್ನಡಕ್ಕಿಂತ ಬೇರೆ ಭಾಷೆಗಳಲ್ಲಿ ಹೆಚ್ಚು ಬ್ಯುಸಿಯಾದ ‘ಕೆಜಿಎಫ್‍’ ನಟ

ಕನ್ನಡದಲ್ಲಿ ಗಮನಸೆಳೆದ ಅದೆಷ್ಟೋ ನಟರು, ಕನ್ನಡದಲ್ಲೇ ಅವಕಾಶವಿಲ್ಲದೆ, ಬೇರೆ ಭಾಷೆಗಳ ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅಂಥವರ ಸಾಲಿನಲ್ಲಿ ‘ಕೆಜಿಎಫ್‍’ ಚಿತ್ರಗಳ ಖ್ಯಾತಿಯ ಅವಿನಾಶ್‍ (KGF Avinash) ಅಲಿಯಾಸ್‍ ಆ್ಯಂಡ್ರೂಸ್‍ ಸಹ ಒಬ್ಬರು. ಬೆಂಗಳೂರು ಮೂಲದ ಅವಿನಾಶ್‍, ‘ಕೆಜಿಎಫ್‍’ ಚಿತ್ರದಲ್ಲಿ ಆ್ಯಂಡ್ರೂಸ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಯಶಸ್ವಿಯಾಗಿ ಅವಿನಾಶ್‍ ಸಹ ಗಮನಸೆಳೆದರು. ಆದರೆ, ಕನ್ನಡದಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ‘ಕೆಜಿಎಫ್‍’ ನಂತರ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ನಟಿಸಿರುವ ಅವಿನಾಶ್‍, ಪರಭಾಷೆಯ ಚಿತ್ರಗಳಲ್ಲಿ ಬೇಡಿಕೆಯ ನಟರಾಗಿದ್ದಾರೆ. ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ…

Read More