
Sanchith Sanjeev; ಕೊನೆಗೂ ಶುರುವಾಯ್ತು ಸುದೀಪ್ ಸೋದರಳಿಯನ ಚಿತ್ರ
ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಲಿಯಾಸ್ ಸಂಚಿ ಅಭಿನಯದಲ್ಲಿ ಎರಡೂವರೆ ವರ್ಷಗಳ ಹಿಂದೆ ‘ಜಿಮ್ಮಿ’ ಎಂಬ ಚಿತ್ರ ಘೋಷಣೆಯಾಗಿತ್ತು. ಚಿತ್ರದಲ್ಲಿ ಸಂಚಿ ಹೀರೋ ಅಷ್ಟೇ ಅಲ್ಲ, ನಿರ್ದೇಶಕರಾಗಿಯೂ ಚಿತ್ರರಂಗಕ್ಕೆ ಪರಿಚಿತರಾಗಬೇಕಿತ್ತು. ಆದರೆ, ಕಾರಣಾಣಂತರಗಳಿಂದ ಚಿತ್ರ ಶುರುವಾಗಲೇ ಇಲ್ಲ. ಈಗ ಸಂಚಿ ಇನ್ನೊಂದು ಚಿತ್ರದ ಮೂಲಕ ಹೀರೋ ಆಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಚಿತ್ರದ ಮುಹೂರ್ತವಾಗಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಅಶ್ವಿನಿ ಪುನೀತ್ ರಾಜಕುಮಾರ್…