
ಕೋಮಲ್ ಜೊತೆಗೆ Sonal; ‘ರೋಲೆಕ್ಸ್’ ಚಿತ್ರೀಕರಣ ಮುಕ್ತಾಯ
ಮಾದೇವ’ ನಂತರ ಸೋನಲ್ (Sonal) ಮುಂದಿನ ಚಿತ್ರ ಯಾವುದು? ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಏಕೆಂದರೆ, ಇತ್ತೀಚೆಗೆ ಸೋನಲ್ ಯಾವೊಂದು ಹೊಸ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇರಲಿಲ್ಲ. ಮದುವೆಯಾದ ಮೇಲೆ ಸೋನಲ್ ನಟನೆಯಿಂದ ಹಿಂದೆ ಸರಿಯುತ್ತಾರಾ? ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುವಾಗಲೇ, ಸೋನಲ್ ಹೊಸದೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ. ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ನಿರ್ಮಿಸುತ್ತಿರುವ ಮೊದಲ ಚಿತ್ರ ‘ರೋಲೆಕ್ಸ್’. ಈ ಹಿಂದೆ ‘ಬಿಲ್ ಗೇಟ್ಸ್’ ಚಿತ್ರವನ್ನು ನಿರ್ದೇಶನ…