
Chomana Dudi; ಚೋಮನ ದುಡಿಗೆ ಅರ್ಧಶತಕ; ಕಾರಂತ ದ್ವಯರ ಅದ್ಭುತಗಳ ಮೆಲುಕು
ಕನ್ನಡ ಸಿನಿಮಾ ಪರಂಪರೆಯನ್ನು ನೋಡುತ್ತಾ ಬಂದರೆ ಅಲ್ಲಿ ರೂಪಾಂತರಗಳನ್ನು ಹೆಚ್ಚು ಕಾಣುತ್ತೇವೆ. ಮೊದಲ ವಾಕ್ಚಿತ್ರ ಸತಿ ಸುಲೋಚನ ನಾಟಕವನ್ನೇ ಸಿನಿಮಾ ಮಾಡಿದ್ದಾಗಿತ್ತು. ಇದು ರಂಗಭೂಮಿಯ ರೂಪಾಂತರ ಎಂದು ನಾವು ನೋಡಬಹುದು. ಧ್ವನಿ ಇರುವ ಚಿತ್ರಕ್ಕೂ ಮೊದಲೇ ಕಾದಂಬರಿ ಆಧಾರಿತ ಸಿನಿಮಾ ಬಂದಿತ್ತು. ದೇವುಡು ನರಸಿಂಹ ಶಾಸ್ತ್ರಿ ಅವರ ʻಕಳ್ಳರ ಕೂಟʼ ಕಾದಂಬರಿಯನ್ನು ʻಕರುಣೆಯೇ ಕುಟುಂಬದ ಕಣ್ಣುʼ ಎಂಬ ಸಿನಿಮಾ ಆಗಿ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರೆದಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಹಿತ್ಯ ಲೋಕ ಮತ್ತು ಸಿನಿಮಾ ಜಗತ್ತು ಒಂದನ್ನೊಂದು…