
Firefly; ಅಲ್ಲಿ ಶಿವ ಪುಟ್ಟಸ್ವಾಮಿ; ಇಲ್ಲಿ ದಿ ಕಿಂಗ್; ‘ಫೈರ್ ಫ್ಲೈ’ನಲ್ಲಿ ಅತಿಥಿಯಾದ ಶಿವಣ್ಣ
ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರದಲ್ಲಿ ಶಿವರಾಜಕುಮಾರ್, ಸಿಂಗಾನಲ್ಲೂರು ಸಂಸ್ಥಾನದ ‘ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ’ಯಾಗಿ ಕಾಣಿಸಿಕೊಳ್ಳುತ್ತಿರುವ ವಿಷಯ ಗೊತ್ತೇ ಇದೆ. ಮುಂದಿನ ವಾರ ಶಿವರಾಜಕುಮಾರ್ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದ್ಯಾವುದು ಎಂಬ ಪ್ರಶ್ನೆ ಬಂದರೆ, ಇಲ್ಲಿದೆ ಉತ್ತರ. ಶಿವರಾಜಕುಮಾರ್ ಮಗಳು ನಿವೇದಿತಾ ಶಿವರಾಜಕುಮಾರ್, ‘ಫೈರ್ ಫ್ಲೈ’ (firefly) ಎಂಬ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್ ಸಂಸ್ಥೆಯಡಿ ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ….