Shiva rajkumar

Firefly; ಅಲ್ಲಿ ಶಿವ ಪುಟ್ಟಸ್ವಾಮಿ; ಇಲ್ಲಿ ದಿ ಕಿಂಗ್; ‘ಫೈರ್ ಫ್ಲೈ’ನಲ್ಲಿ ಅತಿಥಿಯಾದ ಶಿವಣ್ಣ

ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರದಲ್ಲಿ ಶಿವರಾಜಕುಮಾರ್, ಸಿಂಗಾನಲ್ಲೂರು ಸಂಸ್ಥಾನದ ‘ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ’ಯಾಗಿ ಕಾಣಿಸಿಕೊಳ್ಳುತ್ತಿರುವ ವಿಷಯ ಗೊತ್ತೇ ಇದೆ. ಮುಂದಿನ ವಾರ ಶಿವರಾಜಕುಮಾರ್‌ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದ್ಯಾವುದು ಎಂಬ ಪ್ರಶ್ನೆ ಬಂದರೆ, ಇಲ್ಲಿದೆ ಉತ್ತರ. ಶಿವರಾಜಕುಮಾರ್ ಮಗಳು ನಿವೇದಿತಾ ಶಿವರಾಜಕುಮಾರ್‌, ‘ಫೈರ್ ಫ್ಲೈ’ (firefly) ಎಂಬ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್‍ ಸಂಸ್ಥೆಯಡಿ ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಶಿವರಾಜಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ….

Read More

Dali Dhananjaya; ಧನಂಜಯ್‍ ಜೊತೆಗೆ ಹೇಮಂತ್‍ ರಾವ್‍ ಹೊಸ ಚಿತ್ರ; ಸದ್ಯದಲ್ಲೇ ಘೋಷಣೆ

ಶಿವರಾಜಕುಮಾರ್‌ (Shiva Rajkumar) ಅಭಿನಯದಲ್ಲಿ ಹೇಮಂತ್‍ ರಾವ್‍ (Hemanth Rao) ‘ಭೈರವನ ಕೊನೆ ಪಾಠ’ (Bhairavana Kone Paata) ಎಂಬ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಕಳೆದ ವರ್ಷವೇ ಈ ಚಿತ್ರದ ಘೋಷಣೆಯಾಗಿತ್ತು. ಈ ಚಿತ್ರ ಇದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ಧನಂಜಯ್‍ (Dali Dhananjaya) ಅಭಿನಯದಲ್ಲಿ ಹೇಮಂತ್‍ ಹೊಸ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಹೌದು, ‘ಭೈರವನ ಕೊನೆ ಪಾಠ’ ಚಿತ್ರಕ್ಕೂ ಮೊದಲು ಹೇಮಂತ್‍ ರಾವ್‍ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ…

Read More

45 The Movie Teaser Releasing on Ugadi: ಸಂಕ್ರಾಂತಿಗೊಂದು ಟೀಸರ್, ಯುಗಾದಿಗೆ ‘45’ ಚಿತ್ರದ ಇನ್ನೊಂದು ಟೀಸರ್

ಸಂಕ್ರಾಂತಿ ಹಬ್ಬದಂದು ‘45’ ಚಿತ್ರದ ಟೀಸರ್ ಬಿಡುಗಡೆ ಆಗುವುದರ ಜೊತೆಗೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಈ ಟೀಸರ್‌ನಲ್ಲಿ ಬರೀ ಶಿವರಾಜಕುಮಾರ್ ಮಾತ್ರ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಈ ಟೀಸರ್‌ನಲ್ಲಿ ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. (45 The Movie Teaser Releasing on Ugadi) ‘45’ ಚಿತ್ರದ ಹೊಸ ಟೀಸರ್, ಇದೇ ಯುಗಾದಿ ಪ್ರಯುಕ್ತ ಮಾರ್ಚ್‍ 30ರಂದು ಸಂಜೆ…

Read More