
Shashank ಚಿತ್ರಜೀವನದ ದುಬಾರಿ ಹಾಡು ‘ನಾನೇ ನೀನಂತೆ …’ ಬಿಡುಗಡೆ
ಶಶಾಂಕ್ (Shashank) ತಮ್ಮ ಚಿತ್ರಗಳಲ್ಲಿ ಹಾಡುಗಳು ವಿಶೇಷವಾಗಿರುವಂತೆ ನೋಡಿಕೊಳ್ಳುತ್ತಾರೆ. ‘ಮೊಗ್ಗಿನ ಮನಸ್ಸು’ ಚಿತ್ರದಿಂದ ‘ಕೌಸಲ್ಯ ಸುಪ್ರಜಾ ರಾಮ’ವರೆಗೂ ಅವರ ಬಹುತೇಕ ಚಿತ್ರಗಳ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಚಿತ್ರಜೀವನದಲ್ಲೇ ಅತೀ ಹೆಚ್ಚು ಸಮಯ ತೆಗೆದುಕೊಂಡು ಮಾಡಿದ ಹಾಗೂ ಅತ್ಯಂತ ದುಬಾರಿ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಕೃಷ್ಣ ಅಭಿನಯದಲ್ಲಿ ಶಶಾಂಕ್, ‘ಬ್ರ್ಯಾಟ್’ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ‘ನಾನೇ ನೀನಂತೆ …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ…