
ಚಿತ್ರಗಳ ಯಶಸ್ವಿ ಪ್ರದರ್ಶನ; ತಮ್ಮ ಚಿತ್ರ ಮುಂದಕ್ಕೆ ಹಾಕಿದ Sai Prakash
ಹಿರಿಯ ನಿರ್ದೇಶಕ ಸಾಯಿಪ್ರಕಾಶ್ (Sai Prakash) ಅವರು ‘ಸೆಪ್ಟೆಂಬರ್ 10’ ಚಿತ್ರವನ್ನು ನಿರ್ದೇಶಿಸಿರುವುದು ಗೊತ್ತೇ ಇದೆ. ಈ ಚಿತ್ರವನ್ನು ಅವರು ಆಗಸ್ಟ್ 08ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಬೇಕು ಎಂದು ಮುಂದಾಗಿದ್ದರು. ಇದೀಗ ಅವರು ಈ ಚಿತ್ರವನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದು. ಈ ಕುರಿತು ಮಾತನಾಡಿರುವ ಸಾಯಿಪ್ರಕಾಶ್, ‘ಇಷ್ಟು ದಿನ ನಾವು ಕನ್ನಡ ಚಿತ್ರಗಳಿಗೆ ಜನ ಬರುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದೆವು. ಭಗವಂತನ ಆಶೀರ್ವಾದದಿಂದ ಕನ್ನಡ…