Rachitha Ram ವಿರುದ್ಧ ಕ್ರಮ ಕೈಗೊಳ್ಳಿ; ವಾಣಿಜ್ಯ ಮಂಡಳಿಗೆ ನಾಗಶೇಖರ್ ಆಗ್ರಹ

‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ಬರದೆ ಆಟ ಆಡಿಸುತ್ತಿರುವ ನಟಿ ರಚಿತಾ ರಾಮ್‍(Rachitha Ram) ವಿರುದ್ಧ ನಾಗಶೇಖರ್‍ ಸಿಡಿದಿದ್ದಿದ್ದಾರೆ. ಮಂಗಳವಾರ ತಮ್ಮ ತಂಡದ ಸದಸ್ಯರ ಜೊತೆಗೆ ವಾಣಿಜ್ಯ ಮಂಡಳಿಗೆ ಹೋಗಿ ರಚಿತಾ ರಾಮ್‍ ವಿರುದ್ಧ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ರಚಿತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಿರ್ಮಾಪಕರು ಒಂದು ಚಿತ್ರಕ್ಕೆ ಕೋಟ್ಯಂತರ ಬಂಡವಾಳ ಹೂಡಿರುತ್ತಾರೆ. ಕಲಾವಿದರಿಗೆ ಸಂಭಾವನೆ, ಗೌರವ, ಊಟ ಎಲ್ಲವೂ ಕೊಟ್ಟಿರುತ್ತಾರೆ. ಕಲಾವಿದರು…

Read More

20 ನಿಮಿಷ ಹೊಸ ದೃಶ್ಯಗಳೊಂದಿಗೆ ‘Sanju Weds Geetha 2’ ಮತ್ತೆ ಮರುಬಿಡುಗಡೆ

2002ರಲ್ಲಿ ರವಿಚಂದ್ರನ್‍ ಅಭಿನಯದ ಮತ್ತು ನಿರ್ದೇಶನದ ‘Ekangi’ ಬಿಡುಗಡೆಯಾದಾಗ, ಚಿತ್ರ ಜಾಳುಜಾಳಾಗಿದೆ ಎಂಬ ಕಾರಣಕ್ಕೆ ಪ್ರೇಕ್ಷಕರು ತಿರಸ್ಕರಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ರವಿಚಂದ್ರನ್‍ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಮಾಡಿ, ಚಿತ್ರಕ್ಕೆ ಹೊಸದಾಗಿ ಸೇರಿಸಿ, ಮರುಬಿಡುಗಡೆ ಮಾಡಿದ್ದರು. ಇದರಿಂದ ಚಿತ್ರಕ್ಕೆ ಹೆಚ್ಚಿನ ಪ್ರಯೋಜನವೇನೂ ಆಗಿರಲಿಲ್ಲ. ಈಗ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ವಿಷಯದಲ್ಲೂ ಇದು ಮುಂದುವರೆದಿದೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 17ರಂದು ಬಿಡುಗಡೆಯಾಗಿತ್ತು. ಚಿತ್ರಕಥೆ, ನಿರೂಪಣೆ…

Read More
Sanju Weds Geetha 2

‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡಕ್ಕೀಗ ನಿರಾಳ; ತಡೆಯಾಜ್ಞೆ ತೆರವು ಗೊಳಿಸಿದ ನ್ಯಾಯಲಯ

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆದುರಾದ ಸಂಕಷ್ಟ ಇದೀಗ ಬಗೆಹರಿದಿದೆ. ಚಿತ್ರವು ಶುಕ್ರವಾರ (ಜನವರಿ 10) ಬಿಡುಗಡೆ ಆಗಬೇಕಿತ್ತು. ಆದರೆ, ಹೈದರಾಬಾದ್‍ನ ನ್ಯಾಯಾಲಯವು ಚಿತ್ರದ ಬಿಡುಗಡೆ ಮೇಲೆ ತಡೆಯಾಜ್ಞೆ ನೀಡಿದ್ದರಿಂದ, ಚಿತ್ರವು ಅಂದುಕೊಂಡಂತೆ ಬಿಡುಗಡೆ ಆಗಲಿಲ್ಲ. ಇದೀಗ ನ್ಯಾಯಲಯವು ತಡೆಯಾಜ್ಞೆನ್ನು ತೆರವುಗೊಳಿಸಿದ್ದು, ಸಮಸ್ಯೆ ಎದುರಾದಷ್ಟೇ ಬೇಗ ಪರಿಹಾರವೂ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡ ನಿರಾಳವಾಗಿದ್ದು, ಸದ್ಯದಲ್ಲೇ ಚಿತ್ರದ ಹೊಸ…

Read More
Sanju Weds Geetha 2

ಮುಂದಕ್ಕೆ ಹೋಯ್ತು ‘ಸಂಜು ವೆಡ್ಸ್ ಗೀತಾ 2’; ಈ ವಾರ ಬಿಡುಗಡೆ ಇಲ್ಲ

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆ ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗಿದೆ. ಚಿತ್ರದ ಹೊಸ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಸದ್ಯದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಎರಡು ದಿನಗಳ ಹಿಂದೆಯೇ ಚಿತ್ರದ ಬಿಡುಗಡೆ ಅನುಮಾನ ಎಂಬ ಸುದ್ದಿಯೂ ಕೇಳಿಬಂದಿತ್ತು. ಅದಕ್ಕೆ ಕಾರಣ, ಸ್ಟೇ ಆರ್ಡರ್‍ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ನಿರ್ಮಾಪಕರು ಫೈನಾನ್ಶಿಯರ್‌ಗಳ…

Read More