ಜೀವನ ಪೂರ್ತಿ ಮುಗ್ಧತೆ ಕಾಪಾಡಿಕೊಳ್ಳುತ್ತೇನೆ ಎಂದ Yuva Rajkumar

ಯುವ ರಾಜಕುಮಾರ್ (Yuva Rajkumar) ಅಭಿನಯದ ಎರಡನೇ ಚಿತ್ರ ‘ಎಕ್ಕ’ (Ekka) ಕಳೆದ ಬಾರಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಇತ್ತೀಚೆಗೆ ಚಿತ್ರತಂಡ ಸಂತೋಷ ಕೂಟ ಆಯೋಜಿಸಿತ್ತು. ಈ ಗೆಲುವು ಬರೀ ಚಿತ್ರತಂಡದ ಗೆಲುವಲ್ಲ, ಇಡೀ ಚಿತ್ರರಂಗದ ಗೆಲುವು ಎಂದು ಚಿತ್ರತಂಡ ಸಂಭ್ರಮಿಸಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಯುವ ರಾಜಕುಮಾರ್, ‘ಮುತ್ತು ಎಂಬ ಹುಡುಗ ತನ್ನ ಕುಟುಂಬಕ್ಕೋಸ್ಕರ ಊರು ಬಿಡುತ್ತಾನೆ. ತನ್ನ ಕುಟುಂಬ ಸಾಕಬೇಕು ಎಂದು ಸಾಕಷ್ಟು ಕಷ್ಟಪಡುತ್ತಾನೆ. ದುಡಿದು ದೊಡ್ಡದಾಗಿ ಬೆಳೆಯುತ್ತಾನೆ….

Read More

ಹೋರಾಟ ಮಾಡಲು ಹೊರಟ Pruthvi Ambaar ; ‘ಕೊತ್ತಲವಾಡಿ’ ಟ್ರೇಲರ್ ಬಿಡುಗಡೆ

‘ದಿಯಾ’ ಚಿತ್ರದ ನಂತರ ಲವ್ವರ್ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು ಪೃಥ್ವಿ ಅಂಬಾರ್ (Pruthvi Ambaar) . ‘ಮತ್ಸ್ಯಗಂಧ’ ಚಿತ್ರದಲ್ಲಿ ಅವರು ತಮ್ಮ ಇಮೇಜ್‍ ಮುರಿಯುವುದಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿ ಬೇರೆಯದೇ ರೀತಿ ಕಾಣಿಸುತ್ತಿದ್ದಾರೆ. ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌, ತಮ್ಮ ಪಿ.ಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸುತ್ತಿರುವ ಚಿತ್ರ ‘ಕೊತ್ತಲವಾಡಿ’. ಈ ಚಿತ್ರಕ್ಕೆ ಶ್ರೀರಾಜ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು,…

Read More

‘Kantara ಅಧ್ಯಾಯ 1’ ಚಿತ್ರಕ್ಕೆ Rukmini Vasanth ನಾಯಕಿ?

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘Kantara ಅಧ್ಯಾಯ 1’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಈ ಮಧ್ಯೆ, ಚಿತ್ರತಂಡವು ಚಿತ್ರೀಕರಣ ಮುಗಿದ ಖುಷಿಯಲ್ಲಿ ಒಂದು ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿ, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಧನ್ಯವಾದ ತಿಳಿಸಿದೆ. ಈ ಮಧ್ಯೆ, ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಮಾಧ್ಯಮದವರ ಹತ್ತಿರ ಮಾತನಾಡುವ ಸಂದರ್ಭದಲ್ಲಿ, ಚಿತ್ರದಲ್ಲಿ ನಟಿಸಿರುವುದಾಗಿ ಅಚ್ಯುತ್‍ ಕುಮಾರ್ ಹೇಳಿದ್ದರು. ಅವರು ‘ಕಾಂತಾರ’…

Read More

‘ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ Shilpa Srinivas ನಾಯಕ

ಉಪೇಂದ್ರ’, ‘ಪರ್ವ’ ಮುಂತಾದ ಬಿಗ್‍ ಬಜೆಟ್‍ ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ವಿತರಕರಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಶಿಲ್ಪ ಶ್ರೀನಿವಾಸ್‍ (Shilpa Srinivas), ಇದೀಗ ಹೀರೋ ಆಗಿದ್ದಾರೆ. ಶಿಲ್ಪಾ ಶ್ರೀನಿವಾಸ್‍ ಮಗ ಭರತ್‍ ಈಗಾಗಲೇ ಹೀರೋ ಆಗಿದ್ದು, ಅವರ ಮೊದಲ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಿರುವಾಗಲೇ, ಶಿಲ್ಪಾ ಶ್ರೀನಿವಾಸ್‍ ಸಹ ಹೀರೋ ಆಗಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಹೆಸರು ಸಹ ‘ಶಿಲ್ಪಾ ಶ್ರೀನಿವಾಸ್’ ಎನ್ನುವುದು ವಿಶೇಷ. ಇತ್ತೀಚೆಗೆ ಈ ಚಿತ್ರಕ್ಕೆ ಹೊಸಕೊಟೆಯ ಗಟ್ಟಿಗನಬ್ಬೆ ಯಲ್ಲಿ‌…

Read More