ಚಿತ್ರಮಂದಿರಗಳಲ್ಲಿ ‘Ajnathavasi’ ನೋಡದವರಿಗೆ ಓಟಿಟಿಯಲ್ಲಿ ನೋಡಲು ಅವಕಾಶ

ಹೇಮಂತ್‍ ರಾವ್ ‍ನಿರ್ಮಾಣದ, ಜನಾರ್ಧನ್‍ ಚಿಕ್ಕಣ್ಣ ನಿರ್ದೇಶನದ ‘ಅಜ್ಞಾತವಾಸಿ’ (Ajnathavasi) ಚಿತ್ರವು ಏಪ್ರಿಲ್‍ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಚಿತ್ರ, ಬಾಕ್ಸ್ ಆಫೀಸ್‍ನಲ್ಲಿ ಅಷ್ಟೇನೂ ದೊಡ್ಡ ಸದ್ದು ಮಾಡಲಿಲ್ಲ. ಈಗ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. ಈಗ ಚಿತ್ರವು ಜೀ 5ನಲ್ಲಿ ಇದೇ ಮೇ 28ರಿಂದ ಸ್ಟ್ರೀಮ್‍ ಆಗಲು ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ಅಮೇಜಾನ್‍ ಪ್ರೈಮ್‍ನಲ್ಲಿ ಬಿಡುಗಡೆಯಾಗಿವೆ. ಈ ಚಿತ್ರದ ಸ್ಯಾಟಿಲೈಟ್‍ ಮತ್ತು ಡಿಜಿಟಲ್‍ ಹಕ್ಕುಗಳನ್ನು ಜೀ ಕನ್ನಡ…

Read More

ಪ್ರತಿಯೊಬ್ಬ ಅಪ್ಪ-ಅಮ್ಮನಿಗೂ ಎಸ್‍. ನಾರಾಯಣ್‍ ಸಂದೇಶ …

ಎಸ್‍. ನಾರಾಯಣ್‍ (S Narayan) ಆಗಾಗ ತಮ್ಮ ಚಿತ್ರಗಳ ಮೂಲಕ ಸಂದೇಶಗಳನ್ನು ಹೇಳುತ್ತಿರುತ್ತಾರೆ. ಈ ಬಾರಿ ಅವರು ತಮ್ಮ ‘ಮಾರುತ’ ಚಿತ್ರದಲ್ಲೂ ಒಂದು ಸಂದೇಶವನ್ನು ಹೇಳಿದ್ದು, ಮಕ್ಕಳ ಮೇಲೆ ನಿಗಾ ಇಡಿ ಎಂದು ಅವರು ಪ್ರತಿಯೊಬ್ಬ ತಂದೆ-ತಾಯಿಗೂ ಹೇಳಿದ್ದಾರೆ. ‘ದುನಿಯಾ’ ವಿಜಯ್‍ ಮತ್ತು ಕೆ. ಮಂಜು ಮಗ ಶ್ರೇಯಸ್‍ ಮಂಜು ಅಭಿನಯದಲ್ಲಿ ನಿರ್ದೇಶಿಸುತ್ತಿರುವ ‘ಮಾರುತ’ (Marutha) ಚಿತ್ರದ ಮೊದಲ ಹಾಡಿನ ಲಿರಿಕಲ್‍ ವೀಡಿಯೋ ಬಿಡುಗಡೆ ಆಗಿದೆ. ಎಸ್‍. ನಾರಾಯಣ್‍ ಅವರೇ ಹಾಡು ಬರೆದು, ಸಂಗೀತ ಸಂಯೋಜನೆ ಮಾಡಿದ್ದು,…

Read More

20 ನಿಮಿಷ ಹೊಸ ದೃಶ್ಯಗಳೊಂದಿಗೆ ‘Sanju Weds Geetha 2’ ಮತ್ತೆ ಮರುಬಿಡುಗಡೆ

2002ರಲ್ಲಿ ರವಿಚಂದ್ರನ್‍ ಅಭಿನಯದ ಮತ್ತು ನಿರ್ದೇಶನದ ‘Ekangi’ ಬಿಡುಗಡೆಯಾದಾಗ, ಚಿತ್ರ ಜಾಳುಜಾಳಾಗಿದೆ ಎಂಬ ಕಾರಣಕ್ಕೆ ಪ್ರೇಕ್ಷಕರು ತಿರಸ್ಕರಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ರವಿಚಂದ್ರನ್‍ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಮಾಡಿ, ಚಿತ್ರಕ್ಕೆ ಹೊಸದಾಗಿ ಸೇರಿಸಿ, ಮರುಬಿಡುಗಡೆ ಮಾಡಿದ್ದರು. ಇದರಿಂದ ಚಿತ್ರಕ್ಕೆ ಹೆಚ್ಚಿನ ಪ್ರಯೋಜನವೇನೂ ಆಗಿರಲಿಲ್ಲ. ಈಗ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ವಿಷಯದಲ್ಲೂ ಇದು ಮುಂದುವರೆದಿದೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 17ರಂದು ಬಿಡುಗಡೆಯಾಗಿತ್ತು. ಚಿತ್ರಕಥೆ, ನಿರೂಪಣೆ…

Read More

ತಮಿಳಿನ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿದ Tanisha Kuppanda

‘Pen Drive’ ಎಂಬ ಚಿತ್ರದಲ್ಲಿ ನಟಿಸಿರುವ ತನಿಷಾ ಕುಪ್ಪಂಡ, ಆ ಚಿತ್ರದ ಬಿಡುಗಡೆಗೆ ಕಾದಿದ್ದಾರೆ. ಈ ಮಧ್ಯೆ, ಅವರು ಸದ್ದಿಲ್ಲದೆ ತಮಿಳಿನ ಚಿತ್ರವೊಂದರಲ್ಲಿ ನಟಿಸಿ ಬಂದಿದ್ದು, ಇನ್‍ಸ್ಟಾಗ್ರಾಂನಲ್ಲಿ ಅದರ ಮೇಕಿಂಗ್‍ ವೀಡಿಯೋ ಹಂಚಿಕೊಂಡಿದ್ದಾರೆ. ಅಂದಹಾಗೆ, ತನಿಷಾ ಕುಪ್ಪಂಡ ನಟಿಸಿರುವ ತಮಿಳು ಚಿತ್ರದ ಹೆಸರು ‘ಎನ್ ಕಾದಲೇ’. ಈ ಚಿತ್ರದ ‘ರಾಸಾನಾ ಓತಾ ರೋಸಾ …’ ಎಂಬ ಐಟಂ ಸಾಂಗ್‍ನಲ್ಲಿ ತನಿಷಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ…

Read More