ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ಸುದೀಪ್‍? ಹೀಗೊಂದು ಗುಸುಗುಸು …

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ‘ಸೆಟ್‍ ಆಗೋಲ್ಲ ಕಣೆ ನಂಗೂ ನಿಂಗೂ…’ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಒಂದು ಗುಸುಗುಸು ಕೇಳಿ ಬರುತ್ತಿದೆ. ಅದೇನೆಂದರೆ, ನಟ ಸುದೀಪ್‍ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸುವುದರ ಜೊತೆಗೆ ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍ ಮುಂತಾದವರು ನಟಿಸಿದ್ದಾರೆ. ಈಗ ಬಂದಿರುವ ಸುದ್ದಿಯ…

Read More

Prabhas ಆಯ್ತು, ಈಗ Hrithik Roshan ಅಭಿನಯದಲ್ಲಿ Hombale Films ಚಿತ್ರ ನಿರ್ಮಾಣ

ರಿಷಭ್‍ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’  ಚಿತ್ರವನ್ನು ಹೊರತುಪಡಿಸಿದರೆ, ಹೊಂಬಾಳೆ ಫಿಲಂಸ್‍ (Hombale Films) ಯಾವುದೇ ಹೊಸ ಚಿತ್ರವನ್ನು ಶುರು ಮಾಡಿಲ್ಲ. ಪ್ರಭಾಸ್‍ (Prabhas) ಅಭಿನಯದ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆಯಾದರೂ, ಆ ಯಾವುದೇ ಚಿತ್ರಗಳು ಇನ್ನೂ ಶುರುವಾಗಿಲ್ಲ. ಹೀಗಿರುವಾಲೇ, ಹೊಂಬಾಳೆ ಫಿಲಂಸ್‍ ಸಂಸ್ಥೆಯು ಬಾಲಿವುಡ್‍ ನಟ ಹೃತಿಕ್‍ ರೋಶನ್ (Hrithik Roshan) ಅಭಿನಯದಲ್ಲಿ ಪ್ಯಾನ್‍ ಇಂಡಿಯಾ (Pan India) ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. ಈ ಸಂಬಂಧ, ಬುಧವಾರ…

Read More

ಐದು ಪಾತ್ರಗಳು, ಐದು ಕಥೆಗಳು, ಒಂದು ‘ಸೀಸ್ ಕಡ್ಡಿ’ …

ಬೇರೆ ಬೇರೆ ಕಥೆಗಳನ್ನು ಬೆಸೆಯುವ ಚಿತ್ರಗಳು ಕನ್ನಡದಲ್ಲಿ ಹಲವು ಬಂದಿವೆ. ಈಗ ಆ ಸಾಲಿಗೆ ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸೀಸ್ ಕಡ್ಡಿ’ ಚಿತ್ರವನ್ನು ಸಹ ಸೇರಿಸಬಹುದು. ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರತನ್ ಗಂಗಾಧರ್, ‘ಪುಸ್ತಕವೊಂದನ್ನು ಓದಿದಾಗ ಅದರಲ್ಲಿ ಪೆನ್ಸಿಲ್‍ನ ನಾನಾ ಸೂಕ್ಷ್ಮಗಳ ವಿವರವಿತ್ತು. ಅದನ್ನು ಐದು ಪಾತ್ರಗಳನ್ನಾಗಿಸಿ, ಅದಕ್ಕೆ ಹೊಂದಿಕೊಂಡಂತೆ ಐದು ಕಥೆಗಳನ್ನು ಸೃಷ್ಟಿಸಿ, ಆ ಕಥೆಗಳೆಲ್ಲ ಒಂದು ಬಿಂದುವಿನಲ್ಲಿ ಸಂಧಿಸುವ ಪ್ರಯತ್ನ ಮಾಡಿದೆ….

Read More

ಹೀರೋ ಆದ Siddu Moolimani; ’ಸೀಟ್ ಎಡ್ಜ್’ನಿಂದ ಹೊರಬಂತು ಹೊಸ ಹಾಡು …

‘ರಂಗಿ ತರಂಗ’ ಮೂಲಕ ಬೆಳಕಿಗೆ ಬಂದ ಸಿದ್ದು ಮೂಲಿಮನಿ, ಆ ನಂತರ ‘ವಿಕ್ರಾಂತ್ ರೋಣ’, ‘ಅಜ್ಞಾತವಾಸಿ’, ‘ಅಭಿರಾಮಚಂದ್ರ’ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಹೀರೋ ಆಗಿದ್ದು, ‘ಸೀಟ್‍ ಎಡ್ಜ್’ ಎಂಬ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ‘ಸೀಟ್‍ ಎಡ್ಜ್’ ಎಂಬ ಹೆಸರೇ ಹೇಳುವಂತೆ ಸೀಟಿನ ತುದಿಗೆ ತಂದು ಕೂರಿಸುವ ಹಾರರ್‍ ಥ್ರಿಲ್‍ಲರ್‍ ಚಿತ್ರ. ಈ ಚಿತ್ರವನ್ನು ಎನ್. ಆರ್. ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಮತ್ತು ಸುಜಾತ…

Read More