Sapthami Gowda: ಅಂಬಿಕಳಾದ ಸಪ್ತಮಿ; ‘ದಿ ರೈಸ್‍ ಆಫ್‍ ಅಶೋಕ’ಚಿತ್ರಕ್ಕೆ ನಾಯಕಿ

ಕಳೆದ ವರ್ಷ ಬಿಡುಗಡೆಯಾದ ಯುವ ರಾಜಕುಮಾರ್‌ ಅಭಿನಯದ ‘ಯುವ’ ಚಿತ್ರದ ನಂತರ ಸಪ್ತಮಿ ಗೌಡ (Sapthami Gowda) ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಬಿಟ್ಟರೆ, ಕನ್ನಡದಲ್ಲಿ ಸಪ್ತಮಿ ಯಾವೊಂದು ಚಿತ್ರದಲ್ಲಿ ನಟಿಸುತ್ತಿರುವ ವಿಷಯವೂ ಬಹಿರಂಗವಾಗಿರಲಿಲ್ಲ. ಹೀಗಿರುವಾಗಲೇ, ಸತೀಶ್‍ ನೀನಾಸಂ ಅಭಿನಯದ ‘ದಿ ರೈಸ್‍ ಆಫ್‍ ಅಶೋಕ’ (The Rise Of Ashoka) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಅಂಬಿಕಾ ಎಂಬ ಪಾತ್ರದಲ್ಲಿ ಸಪ್ತಮಿ ನಟಿಸುತ್ತಿದ್ದು, ಆಕೆಯ ಮೊದಲ ಪೋಸ್ಟರ್‌…

Read More

Toxic Release Date; ಯಶ್‍ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಪ್ರಕಟ…

ಯಶ್‍ (Yash) ಅಭಿನಯದ ‘ಟಾಕ್ಸಿಕ್‍’ (Toxic) ಚಿತ್ರದ ಚಿತ್ರೀಕರಣ ಕಳೆದ ಕೆಲವು ತಿಂಗಳುಗಳಿಂದ ಭರದಿಂದ ಸಾಗಿದೆ. ಚಿತ್ರವು ಈ ವರ್ಷದ ಏಪ್ರಿಲ್‍ 10ರಂದು ಬಿಡುಗಡೆ ಆಗುತ್ತದೆ (Toxic Release Date) ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಚಿತ್ರದ ಚಿತ್ರೀಕರಣವೇ ಮುಗಿಯದ ಕಾರಣ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಈಗ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ‘ಟಾಕ್ಸಿಕ್‍’ ಚಿತ್ರವು ಕಳೆದ ವರ್ಷದ ಆರಂಭದಲ್ಲಿ ಘೋಷಣೆಯಾಗಿತ್ತು. ಘೋಷಣೆಯ ದಿನವೇ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಅದರ ಪ್ರಕಾರ, ಚಿತ್ರವು 2025ರ…

Read More

L2: Empuraan; ಕರ್ನಾಟಕಕ್ಕೆ ‘L2E: ಎಂಪುರಾನ್’ ಚಿತ್ರ ತಂದ ಹೊಂಬಾಳೆ ಫಿಲಂಸ್‍

ಈ ವರ್ಷದ ಬಹುನಿರೀಕ್ಷಿತ ಮಲಯಾಳಂ ಚಿತ್ರಗಳಲ್ಲಿ ಪೃಥ್ವಿರಾಜ್‍ ಸುಕುಮಾರನ್‍ ನಿರ್ದೇಶನದ ‘L2E: ಎಂಪುರಾನ್’ (L2: Empuraan) ಚಿತ್ರ ಸಹ ಒಂದು. ಮಾರ್ಚ್ 27ರಂದು ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್‍ ಸಂಸ್ಥೆಯು ವಿತರಿಸುತ್ತಿದೆ. ‘L2E: ಎಂಪುರಾನ್’ ಚಿತ್ರವು 2019ರಲ್ಲಿ ಬಿಡುಗಡೆಯಾದ ‘ಲೂಸಿಫರ್‌’ ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ನಟ ಪೃಥ್ವಿರಾಜ್‍ ಸುಕುಮಾರನ್‍ ಮೊದಲ ಬಾರಿಗೆ ನಿರ್ದೇಶಕರಾದರು. ಈ ಚಿತ್ರ ಯಶಸ್ವಿಯಾಗುವುದಷ್ಟೇ ಅಲ್ಲ, ತೆಲುಗಿನಲ್ಲಿ ರೀಮೇಕ್‍ ಸಹ ಆಗಿತ್ತು. ಈ ಚಿತ್ರದ ಯಶಸ್ಸಿನಿಂದ…

Read More

Mallikarjun Bande life story; ಕೊನೆಗೂ ಸಿನಿಮಾ ಆಯ್ತು ಮಲ್ಲಿಕಾರ್ಜುನ ಬಂಡೆ ಲೈಫ್‍ ಸ್ಟೋರಿ

ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್‍ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ (Mallikarjun Bande) ಅವರ ಕುರಿತು ಚಿತ್ರ ನಿರ್ಮಾಣ ಮಾಡುವುದಕ್ಕೆ ಪೈಪೋಟಿಯೇ ನಡೆದಿತ್ತು. ಸುದೀಪ್‍ ಅಥವಾ ದರ್ಶನ್‍ ಅಭಿನಯದಲ್ಲಿ ‘ಬಂಡೆ’ ಎಂಬ ಚಿತ್ರ ಮಾಡುವುದಾಗಿ ಕೆಲವರು ಘೋಷಿಸಿ ಸುದ್ದಿ ಮಾಡಿದ್ದರು. ಆದರೆ, ಬಂಡೆ ಅವರ ಕಥೆ ಚಿತ್ರವಾಗಲೇ ಇಲ್ಲ. ಬಂಡೆ ನಿಧನರಾಗಿ 11 ವರ್ಷಗಳ ನಂತರ ಈಗ ಕೊನೆಗೂ ಅವರ ಕುರಿತು ಚಿತ್ರ ತಯಾರಾಗಿದೆ….

Read More