
MAHAAN MOVIE; ರೈತರ ಕುರಿತಾದ ಚಿತ್ರದಲ್ಲಿ ಹಳ್ಳಿಹುಡುಗಿಯಾದ ರಾಧಿಕಾ ನಾರಾಯಣ್ …
ವಿಜಯ್ ರಾಘವೇಂದ್ರ ಅಭಿನಯದ ‘ಮಹಾನ್’(MAHAAN) ಚಿತ್ರದ ಕುರಿತು ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಅದೆಷ್ಟು ಸುದ್ದಿಗಳು ಬರುತ್ತವೋ ಗೊತ್ತಿಲ್ಲ. ಇತ್ತೀಚೆಗಷ್ಟೇ, ಚಿತ್ರತಂಡಕ್ಕೆ ನಟ ಮಿತ್ರ ಸೇರ್ಪಡೆಯಾದ ಸುದ್ದಿಯೊಂದು ಕೇಳಿಬಂದಿತ್ತು. ಇದೀಗ ಚಿತ್ರಕ್ಕೆ ರಾಧಿಕಾ ನಾರಾಯಣ್ ಸೇರ್ಪಡೆಯಾಗಿರುವ ಸುದ್ದಿ ಬಂದಿದೆ. ರಮೇಶ್ ಅರವಿಂದ್ ಅಭಿನಯಿಸುತ್ತಿರುವ ‘ದೈಜಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ರಾಧಿಕಾ, ವಿಜಯ್ ರಾಘವೇಂದ್ರ ಅಭಿನಯದ ‘ಮಹಾನ್’ ಚಿತ್ರಕ್ಕೂ ನಾಯಕಿಯಾಗಿ ಸೇರ್ಪಡೆಯಾಗಿದ್ದಾರೆ. ಇದೊಂದು ರೈತರ ಕುರಿತ ಚಿತ್ರವಾಗಿದ್ದು, ಇದರಲ್ಲಿ ರಾಧಿಕಾ ನಾರಾಯಣ್ ಹಳ್ಳಿಹುಡುಗಿಯಾಗಿ ನಟಿಸುತ್ತಿದ್ದಾರಂತೆ. ಈ…