Kantara Chapter 1

250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ

ರಿಷಭ್‍ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ (Kantara Chapter 1) ಚಿತ್ರವು ಅಕ್ಟೋಬರ್ 02ರಂದು ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಆದರೆ, ಚಿತ್ರದ ಚಿತ್ರೀಕರಣವೇ ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರವು ಅಂದುಕೊಂಡತೆಯೇ ಅಕ್ಟೋಬರ್‌ 02ರಂದು ಬಿಡುಗಡೆಯಾಗುತ್ತದಾ? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಯಾವಾಗ ಈ ಕುರಿತು ಪ್ರಶ್ನೆಗಳು ಹೆಚ್ಚಾದವೋ? ಹೊಂಬಾಳೆ ಫಿಲಂಸ್‍ ಸಂಸ್ಥೆಯು ಚಿತ್ರವು ಅಂದುಕೊಂಡಂತೆಯೇ ಅಕ್ಟೋಬರ್‌ 02ರಂದು ಬಿಡುಗಡೆಯಾಗಲಿದೆ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿತ್ತು. ಅದರ ಹೊರತಾಗಿಯೂ…

Read More

ಸೋಮೇಶ್ವರದ ಸುಲೋಚನಳ ಜೊತೆಗೆ ಬಂದ Raj B Shetty…

ರಾಜ್‍ ಬಿ. ಶೆಟ್ಟಿ (Raj B Shetty) ನಟನೆ ಜೊತೆಗೆ ನಿರ್ಮಾಣದಲ್ಲೂ ಸಕ್ರಿಯರಾಗಿದ್ದು, ಆಗೊಂದು ಈಗೊಂದು ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುತ್ತಾರೆ. ಈಗ ಅವರು ಸದ್ದಿಲ್ಲದೆ ತಮ್ಮ ಲೈಟರ್ ಬುದ್ಧ (Lighter Buddha) ಫಿಲಂಸ್ ಸಂಸ್ಥೆಯಡಿ ‘ಸು ಫ್ರಮ್‍ ಸೋ’(Su from So) ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಹೆಸರು ಕೇಳಿದರೆ ಆಶ್ಚರ್ಯವಾಗಬಹುದ. ಇಷ್ಟಕ್ಕೂ ಏನಿದು ‘ಸು ಫ್ರಮ್‍ ಸೋ’. ಅದರರ್ಥ ಸುಲೋಚನ ಫ್ರಮ್‍ ಸೋಮೇಶ್ವರ ಎಂದರ್ಥ. ಇದೊಂದು ಹಾರರ್ ಕಾಮಿಡಿ ಚಿತ್ರವಾಗಿದ್ದು, ಜುಲೈ 25ರಂದು ಬಿಡುಗಡೆಯಾಗುತ್ತಿದೆ. ನಟ ಜೆ.ಪಿ. ತುಮಿನಾಡು ನಿರ್ದೇಶನದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ….

Read More
madenur manu and shivarajkumar controversy

ಶಿವಣ್ಣ ನನ್ನನ್ನು ಕ್ಷಮಿಸಿದರೆ ನಾನು ಜೀವನ ಕಟ್ಟಿಕೊಳ್ಳುತ್ತೇನೆ ಎಂದ Madenuru Manu

ಮಡೆನೂರು ಮನು (Madenuru Manu) ಕಳೆದ ಎರಡು ತಿಂಗಳುಗಳಿಂದ ಒಂದಲ್ಲ ಒಂದು ವಿವಾದದಲ್ಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೆಲವು ದಿನಗಳ ಕಾಲ ಜೈಲುಪಾಲಾಗಿದ್ದರು. ಅದರ ಜೊತೆಗೆ ಶಿವರಾಜಕುಮಾರ್, ದರ್ಶನ್‍ (Challenging star Darshan) ಮತ್ತು ಧ್ರುವ (Dhruva Sarja) ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮನು, ಅದಕ್ಕೆ ಚಿತ್ರರಂಗದಿಂದ ಬ್ಯಾನ್‍ ಸಹ ಆಗಿದ್ದರು. ಇದೀಗ ಬೇಲ್‍ ಮೇಲೆ ಹೊರಗೆ ಬಂದಿರುವ ಅವರು, ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನನಾಡಿರುವ ಮನು, ‘ನನ್ನ…

Read More

ಏಕಕಾಲಕ್ಕೆ ಆರು ಚಿತ್ರಗಳನ್ನು ಘೋಷಿಸಿದ Amrita Cine Craft ಸಂಸ್ಥೆ

ಕೆಲವು ವರ್ಷಗಳ ನಂತರ ನಟಿ ಪೂಜಾ ಗಾಂಧಿ, ಫಿಲ್ಮ್ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ 10 ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದರು. ಆ ಪೈಕಿ ಮೂರು ಚಿತ್ರಗಳ ಹೆಸರುಗಳನ್ನು ಸಹ ಅವರು ಘೋಷಿಸಿದ್ದರು. ಆದರೆ, ಯಾವೊಂದು ಚಿತ್ರವೂ ಸೆಟ್ಟೇರಲಿಲ್ಲ. ಇನ್ನು, ಕಳೆದ ವರ್ಷ ನಿರ್ಮಾಪಕ-ನಿರ್ದೇಶಕ ಆರ್‌. ಚಂದ್ರು ಒಂದೇ ವೇದಿಕೆಯಲ್ಲಿ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದರು. ಈ ಪೈಕಿ ಒಂದು ಚಿತ್ರ ಮಾಡಿ ಸೆಟ್ಟೇರಿ ಮುಗಿದಿದೆ. ಈಗ್ಯಾಗೆ ಈ ಮಾತು ಎಂದರೆ, ಹೊಸ ಸಂಸ್ಥೆಯೊಂದು ಇತ್ತೀಚೆಗೆ…

Read More