
‘Just Married’ ಟ್ರೇಲರ್ ಬಿಡುಗಡೆ; ಚಿತ್ರ ಆಗಸ್ಟ್ 22ರಂದು ತೆರೆಗೆ
ಅಲ್ಲಿ ಮದುವೆ ಮನೆ ವಾತಾವರಣ ನಿರ್ಮಾಣವಾಗಿತ್ತು. ಮುಂಭಾಗಲಿನಲ್ಲೇ ಮಂಗಳದ್ರವ್ಯಗಳನ್ನು ನೀಡಿ, ಮುತ್ತಿನ ಹಾರ ಹಾಕಿ ಬಂದ ಅತಿಥಿಗಳನ್ನು ಸ್ವಾಗತಿಸಲಾಯಿತು. ಹೆಣ್ಣುಮಕ್ಕಳು ಮೆಹಂದಿ ಹಾಕಿಸಿಸಕೊಂಡು ಸಂಭ್ರಮಿಸುತ್ತಿದ್ದದ್ದು ಅಲ್ಲಿ ಕಂಡು ಬಂತು. ಆದರೆ, ಅದು ಮದುವೆ ಮನೆಯಲ್ಲ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ. abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ (Just Married) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ…