Spark Movie Controversy: ವಿವಾದಕ್ಕೆ ತೆರೆ; ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ‘ಸ್ಪಾರ್ಕ್’ ಚಿತ್ರತಂಡ

ನಿರಂಜನ್‍ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್‍ ನಟಿಸುತ್ತಿರುವ ವಿಷಯ ಶುಕ್ರವಾರ ಕೇಳಿ ಬಂದಿತ್ತು. ಈ ಚಿತ್ರತಂಡದಿಂದ ಬಿಡುಗಡೆಯಾದ ಒಂದು ಫೋಟೋ ಸಾಕಷ್ಟು ವಿವಾದ ಎಬ್ಬಿಸಿ, ಈಗ ಬಗೆಹರಿದಿದೆ. ಒಂದೇ ದಿನದಲ್ಲಿ ವಿವಾದ ಶುರುವಾಗಿ, ಮುಗಿದಿದ್ದು ವಿಶೇಷ. ‘ಸ್ಪಾರ್ಕ್’ ಚಿತ್ರದ ಪೋಸ್ಟರ್‍ನಲ್ಲಿ ಪ್ರೇಮ್‍, ಬೆಂಕಿ ಅಂಟಿರುವ ಭಿತ್ತಿಪತ್ರದಿಂದ ತಮ್ಮ ಸಿಗಾರ್‍ ಹಚ್ಚುತ್ತಿರುವ ದೃಶ್ಯವಿದೆ. ಈ ಭಿತ್ತಿಪತ್ರದಲ್ಲಿ ರಮೇಶ್‍ ಇಂದಿರಾ ಅವರ ಭಾವಚಿತ್ರವಿದೆ. ಮೊದಲಿಗೆ ‘ಸ್ಪಾರ್ಕ್’ ಚಿತ್ರದಲ್ಲಿ ಅವರು ನಟಿಸುತ್ತಿಲ್ಲ. ಮೇಲಾಗಿ, ಅದು ‘ಭೀಮ’ ಚಿತ್ರದ ಫೋಟೋ….

Read More