
ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ Raja Vardan ಹೊಸ ಚಿತ್ರ
ಒಂದೂವರೆ ವರ್ಷಗಳ ಹಿಂದೆ, ‘ಅನ್‍ಲಾಕ್ ರಾಘವ’ ನಾಯಕ ಮಿಲಿಂದ್ ಗೌತಮ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಿರುವುದಾಗಿ ‘ಬಿಗ್ ಬಾಸ್’ ಸ್ಪರ್ಧಿ ಚಂದ್ರಚೂಡ್ ಘೋಷಿಸಿದ್ದರು. ಅದಕ್ಕೂ ಒಂದೂವರೆ ವರ್ಷದ ಮೊದಲು ನಾಗಶೇಖರ್ ಅಭಿನಯದಲ್ಲಿ ‘ಪಾದರಾಯ’ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ಮಾಡುವುದಾಗಿ ಪತ್ರಿಕಾಗೋಷ್ಠಿ ಸಹ ಮಾಡಿದ್ದರು. ಈ ಎರಡೂ ಚಿತ್ರಗಳು ಸುದ್ದಿಯಾಯಿತೇ ಹೊರತು, ಮುಂದುವರೆಯಲೇ ಇಲ್ಲ. ಹೀಗಿರುವಾಗಲೇ, ಚಕ್ರವರ್ತಿ ಚಂದ್ರಚೂಡ್ ಇನ್ನೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿರುವ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ರಾಜವರ್ಧನ್ (Raja Vardan) ಅಭಿನಯದಲ್ಲಿ…