
45 The Movie Teaser Releasing on Ugadi: ಸಂಕ್ರಾಂತಿಗೊಂದು ಟೀಸರ್, ಯುಗಾದಿಗೆ ‘45’ ಚಿತ್ರದ ಇನ್ನೊಂದು ಟೀಸರ್
ಸಂಕ್ರಾಂತಿ ಹಬ್ಬದಂದು ‘45’ ಚಿತ್ರದ ಟೀಸರ್ ಬಿಡುಗಡೆ ಆಗುವುದರ ಜೊತೆಗೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಈ ಟೀಸರ್‌ನಲ್ಲಿ ಬರೀ ಶಿವರಾಜಕುಮಾರ್ ಮಾತ್ರ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಈ ಟೀಸರ್‌ನಲ್ಲಿ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. (45 The Movie Teaser Releasing on Ugadi) ‘45’ ಚಿತ್ರದ ಹೊಸ ಟೀಸರ್, ಇದೇ ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ಸಂಜೆ…