
Duniya Vijay as Landlord: ಭೀಮ ಈಗ ‘ಲ್ಯಾಂಡ್ ಲಾರ್ಡ್’; ‘ಕಾಟೇರ’ ನಿರ್ದೇಶಕರಿಂದ ಭೂ ಒಡೆತನದ ಹೋರಾಟದ ಕಥೆ
ದುನಿಯಾ ವಿಜಯ್ ಜನ್ಮದಿನದಂದು ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಭೀಮ ಚಿತ್ರದ ಯಶಸ್ಸಿನ ನಂತರ ವಿಜಯ್ ಅವರೇ ಮತ್ತೊಂದು ಸಿನಿಮಾ ತಮಗೆ ತಾವೇ ನಿರ್ದೇಶಿಸಿಕೊಳ್ಳುತ್ತಾರೆ ಎಂಬ ಮಾತು ಗಾಂಧೀನಗರದಲ್ಲಿತ್ತು. ಆದರೆ, ದರ್ಶನ್‌ಗೆ ಕಾಟೇರ ಮಾಡಿದ ಜಡೇಶ್ ಹಂಪಿ ಅವರು ದುನಿಯಾ ವಿಜಯ್ ಅವರ 29ನೇ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಲ್ಯಾಂಡ್ ಲಾರ್ಡ್’ ಎಂದು ಹೆಸರಿಡಲಾಗಿದೆ. ವಿಜಯ್ ಹುಟ್ಟು ಹಬ್ಬದಂದು ಟೈಟಲ್ ರಿವಿಲ್ ಮಾಡಲಾಗಿದೆ. ರಾಚಯ್ಯ ಎಂಬ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಹಾಡು ಮತ್ತು ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ…