
ʻElumaleʼಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ …
‘ಏಕ್ ಲವ್ ಯಾ’ ಚಿತ್ರದಲ್ಲಿ ನಾಯಕನಾಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣ, ಆ ನಂತರ ತರುಣ್ ಸುಧೀರ್ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವರ್ಷದ ಆರಂಭದಲ್ಲೇ ಬಂದಿತ್ತು. ಆದರೆ, ಅದರ ಹೆಸರೇನು? ಸೇರಿದಂತೆ ಯಾವ ಪ್ರಶ್ನೆಗೂ ಚಿತ್ರತಂಡ ಉತ್ತರ ಕೊಟ್ಟಿರಲಿಲ್ಲ. ಈಗ ಕೊನೆಗೂ ಉತ್ತರ ಸಿಕ್ಕಿದ್ದು, ಚಿತ್ರಕ್ಕೆ ‘ಏಳುಮಲೆ’ ಎಂಬ ಹೆಸರಿಡಲಾಗಿದ್ದು, ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ತರುಣ್ ಕಿಶೋರ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಜೊತೆಯಾಗಿ ನಿರ್ಮಾಣ ಮಾಡುತ್ತಿರುವ ‘ಏಳುಮಲೆ’ (Elumale) ಚಿತ್ರದ…