
Pruthvi Ambaar; ಸದ್ದಿಲ್ಲದೆ ಮುಗಿದ ಪೃಥ್ವಿ ಹೊಸ ಚಿತ್ರ; ಈ ಚಿತ್ರಕ್ಕೆ ಯಶ್ ತಾಯಿ ನಿರ್ಮಾಪಕಿ
ಪೃಥ್ವಿ ಅಂಬಾರ್ ಅಭಿನಯದ ಹೊಸ ಚಿತ್ರವನ್ನು ಪಿ.ಎ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಬಂದಿತ್ತು. ಈಗ ಆ ಪಿ. ಎ ಯಾರು ಎಂಬ ವಿಷಯ ಬಹಿರಂಗವಾಗಿದೆ. ಪಿ.ಎ ಎಂದರೆ ಪುಷ್ಪಾ ಅರುಣ್ ಕುಮಾರ್ ಎಂದರ್ಥ. ಯಶ್ ಅವರ ತಾಯಿ ಪುಷ್ಪಾ ಇದೀಗ ಚಿತ್ರ ನಿರ್ಮಾಣಕ್ಕಿಳಿದಿದ್ದು, ಪೃಥ್ವಿ ಅಂಬಾರ್ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರಕ್ಕೆ ‘ಕೊತ್ತಲವಾಡಿ’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ಶ್ರೀರಾಜ್ ಕಥೆ-ಚಿತ್ರಕಥೆ…