
Interval completes 25 days; 22 ಸಾವಿರ ಜನ ನೋಡಿದ ‘ಇಂಟರ್ವೆಲ್’ಗೆ 25 ದಿನದ ಸಂಭ್ರಮ
ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು 25 ದಿನ ಮುಗಿಸಿವೆ, 50 ದಿನ ಮುಗಿಸಿವೆ ಎಂದು ಚಿತ್ರತಂಡಗಳು ಹೇಳಿಕೊಳ್ಳುತ್ತವೆ. ಆದರೆ, ಚಿತ್ರದ ಗಳಿಕೆ ಎಷ್ಟು? ಹಾಕಿದ ಬಂಡವಾಳ ಬಂದಿದೆಯಾ? ಎಂಬ ವಿಷಯವನ್ನು ಮಾತ್ರ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಈ ವರ್ಷ 25 ದಿನಗಳು ಓಡಿದ ಚಿತ್ರಗಳ ಪೈಕಿ ‘ಇಂಟರ್ವೆಲ್’ (Interval) ಸಹ ಒಂದು. ಗಣೇಶ ಎಂಬ ಒಂದೇ ಹೆಸರಿನ ಮೂವರು ಸ್ನೇಹಿತರು ತಮ್ಮ ಬಾಲ್ಯ ಮತ್ತು ಯೌವ್ವನದಲ್ಲಿ ಮಾಡುವ ತರಲೆಗಳು ಮತ್ತು ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂದು…