
Puneeth Rajkumar; ಅಪ್ಪು 50ನೇ ಬರ್ತ್‌ಡೇಗೆ ‘ಪಿಚ್ಚರ್ ಪೋಸ್ಟ್ ಕಾರ್ಡ್’ ಬಿಡುಗಡೆ ಮಾಡಿದ ಅಂಚೆ ಇಲಾಖೆ
ಮಾರ್ಚ್ 17, ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬ. ಈ ಸಂದರ್ಭವನ್ನು ವಿಶೇಷ ಸ್ಮರಣೀಯವಾಗಿಸಲು ಭಾರತೀಯ ಅಂಚೆ ಇಲಾಖೆ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಬೆಂಗಳೂರು ಕೇಂದ್ರ ಅಂಚೆ ಮಹಾಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಅಪ್ಪು ಸ್ಮರಣಾರ್ಥ ವಿಶೇಷ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ. ‘ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು ಗಂಧದಗುಡಿ ಅಗರಬತ್ತಿ’ ಸಹಯೋಗದೊಂದಿಗೆ ಈ ಪೋಸ್ಟ್ ಕಾರ್ಡ್‌ಗಳನ್ನು ಹೊರತರಲಾಗುತ್ತಿದೆ. ಆಸಕ್ತರು ಕರ್ನಾಟಕದ ಅಂಚೆಚೀಟಿ ಸಂಗ್ರಹಣಾ ಬ್ಯೂರೋಗಳಿಂದ…