
Ram Charan Peddi; ಮುಂದಿನ ರಾಮನವಮಿಗೆ ರಾಮ್ ಚರಣ್, ಶಿವಣ್ಣ ಅಭಿನಯದ ಚಿತ್ರ ಬಿಡುಗಡೆ
ಟಾಲಿವುಡ್ ನಟ ರಾಮ್ ಚರಣ್ ತೇಜ (Ram Charan) ಅಭಿನಯದ ‘ಪೆದ್ದಿ’ (Peddi) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕೊನೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ವಿಶೇಷವೆಂದರೆ ಮುಂದಿನ ರಾಮ ನವಮಿ ಸಂದರ್ಭದಲ್ಲಿ ‘ಪೆದ್ದಿ’ ಚಿತ್ರವು ಬಿಡುಗಡೆಯಾಗಲಿದೆ. ಮುಂದಿನ ವರ್ಷ ರಾಮ ನವಮಿಯನ್ನು ಮಾರ್ಚ್ 26ರಂದು ಆಚರಿಸಲಾಗುತ್ತಿದ್ದು, ಅದಾದ ಮರುದಿನವೇ ಅಂದರೆ ಮಾರ್ಚ್ 27ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಇದೊಂದು ಕ್ರೀಡೆ ಆಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ…