Muddu Rakshasi; ‘ಮುದ್ದು ರಾಕ್ಷಸಿ’ ಕಣ್ಣೀರು ಹಾಕಿದಾಗ; ಜೊತೆಗೆ ಕಾಣಿಸಿಕೊಂಡ ಚಂದನ್, ನಿವೇದಿತಾ

ಚಂದನ್‍ ಶೆಟ್ಟಿ ಮತ್ತು ನಿವೇದಿತಾ ಜೋಡಿ ಒಟ್ಟಿಗೆ ಇದ್ದ ಕಾಲದಲ್ಲಿ ಅವರಿಬ್ಬರೂ ನಾಯಕ-ನಾಯಕಿಯಾಗಿ ‘ಮುದ್ದು ರಾಕ್ಷಸಿ’ (Muddu Rakshasi) ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಇಬ್ಬರೂ ವಿಚ್ಛೇದನ ಪಡೆದಿದ್ದಾಗಿದೆ. ಕಾರಣಾಂತರಗಳಿಂದ ತಡವಾದ ಚಿತ್ರ, ಇದೀಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಇತ್ತೀಚೆಗೆ ಅಂಜನಾಪುರದಲ್ಲಿರುವ ವಜ್ರಮುನಿ ಎಸ್ಟೇಟ್‍ನಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು. ಚಂದನ್‍ ಮತ್ತು ನಿವೇದಿತಾ ಇಬ್ಬರೂ ವಿದಾಯ ಹೇಳುವ ಸನ್ನಿವೇಶವನ್ನು ನಿರ್ದೇಶಕ ಪುನೀತ್ ಶ್ರೀನಿವಾಸ್‍ ಚಿತ್ರೀಕರಿಸಿಕೊಂಡರು. ವಿಚ್ಛೇದನ ನಂತರ ಮೊದಲ ಬಾರಿಗೆ ಚಂದನ್,…

Read More