
Nagarahavu; ಕನ್ನಡದಲ್ಲೊಂದು ಹೊಸ ಪ್ರಯೋಗ; 53 ವರ್ಷಗಳ ನಂತರ ‘ನಾಗರಹಾವು’ ಮುಂದಿನ ಭಾಗ
ಸಾಮಾನ್ಯವಾಗಿ ಒಂದು ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ಅದರ ಮುಂದಿನ ಭಾಗ ಬರುವುದು ವಾಡಿಕೆ. ಆದರೆ, ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದಾದ ‘ನಾಗರಹಾವು’ ಚಿತ್ರದ ಮುಂದಿನ ಭಾಗವು, ಆ ಚಿತ್ರ ಬಿಡುಗಡೆಯಾಗಿ 53 ವರ್ಷಗಳ ಕಾಲ ಬಿಡುಗಡೆಯಾಗುತ್ತಿರುವುದು ವಿಶೇಷ. ಈ ಹಿಂದೆ ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ’ ಮತ್ತು ‘ದೇವನಹಳ್ಳಿ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪಲ್ಲಕ್ಕಿ ರಾಧಾಕೃಷ್ಣ, ಈಗ ಸದ್ದಿಲ್ಲದೆ ಹೊಸ ಸಿನಿಮಾ ಮಾಡಿದ್ದಾರೆ. ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಎಂಬ ಚಿತ್ರವನ್ನು ಮುಗಿಸಿದ್ದು, ಇದು ‘ನಾಗರಹಾವು’ ಚಿತ್ರದ ಮುಂದುವರೆದ ಭಾಗವಾಗಿದೆ….