
Duniya Vijay; ‘ಮಾರುತ’ನಾದ ವಿಜಯ್; ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ
ಶ್ರೇಯಸ್ ಮಂಜು ಮತ್ತು ಬೃಂದಾ ಆಚಾರ್ಯ ಅಭಿನಯದಲ್ಲಿ ಎಸ್. ನಾರಾಯಣ್, ಎರಡು ವರ್ಷಗಳ ಹಿಂದೆ ಒಂದು ಚಿತ್ರ ಪ್ರಾರಂಭಿಸಿದ್ದರು. ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರವಿದ್ದು, ಆ ಪಾತ್ರದಲ್ಲಿ ದೊಡ್ಡ ನಟರೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಮಾತುಕತೆ ನಡೆಯುತ್ತಿದೆ ಎಂದು ನಾರಾಯಣ್ ಹೇಳಿದ್ದರು. ಈಗ ಆ ಚಿತ್ರಕ್ಕೆ ‘ದುನಿಯಾ’ ವಿಜಯ್ ಎಂಟ್ರಿಯಾಗಿದೆ. ಅಷ್ಟೇ ಅಲ್ಲ, ಚಿತ್ರಕ್ಕೆ ‘ಮಾರುತ’ ಎಂಬ ಹೆಸರನ್ನೂ ಇಡಲಾಗಿದೆ. ‘ದುನಿಯಾ’ ವಿಜಯ್ ಅಭಿನಯದಲ್ಲಿ ಎಸ್. ನಾರಾಯಣ್ ಇದಕ್ಕೂ ಮೊದಲು ‘ಚಂಡ’ ಹಾಗೂ ‘ದಕ್ಷ’ ಚಿತ್ರಗಳನ್ನು ನಿರ್ದೇಶನ…