
Shyam Benegal; ಲಾಸ್ ಏಂಜಲೀಸ್ ಸಿನಿಮೋತ್ಸವಕ್ಕೆ ಶ್ಯಾಮ್ ಬೆನಗಲ್ ನಿರ್ದೇಶನದ ‘ಮಂಥನ್’ ಆಯ್ಕೆ
ಬೆಂಗಳೂರು: ಅಮೆರಿಕದ ಲಾಸ್ ಏಂಜಲೀಸ್ನ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್ನಲ್ಲಿ ನಡೆಯಲಿರುವ ಸಿನಿಮೋತ್ಸವದಲ್ಲಿ ಶ್ಯಾಮ್ ಬೆನಗಲ್ ನಿರ್ದೇಶನದ ‘ಮಂಥನ್’ ಸಿನಿಮಾವು ಪ್ರದರ್ಶನವಾಗಲಿದೆ. ಭಾರತದ ಪ್ರಮುಖ 12 ಸಿನಿಮಾಗಳು ‘ಬಣ್ಣದಲ್ಲಿ ಭಾವಪರವಶತೆ: ಭಾರತೀಯ ವೈವಿಧ್ಯಮಯ ಸಿನಿಮಾ’ ಎಂಬ ವಿಭಾಗದಡಿ ಪ್ರದರ್ಶನವಾಗುತ್ತಿದ್ದು, ಇದರಲ್ಲಿ ಮಾರ್ಚ್ 10ರಂದು ‘ಮಂಥನ್’ ಪ್ರದರ್ಶನಗೊಳ್ಳಲಿದೆ. ಮಂಥನ್ ಜಗತ್ತಿನ ಮೊದಲ ಕ್ರೌಡ್ಫಂಡಿಂಗ್ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದೆ. ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ, ಗಿರೀಶ್ ಕಾರ್ನಾಡ್, ಅಮರೀಶ್ ಪುರಿ ಅವರು ಪ್ರಮುಖ ತಾರಾಗಣದಲ್ಲಿದ್ದಾರೆ….