
Yash; ‘ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ …’
ದೊಡ್ಡ ಸ್ಟಾರ್ ನಟರು ತಮ್ಮ ಚಿತ್ರಗಳ ಪ್ರಚಾರ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಹಾಗಾಗಿ, ಬಹಳಷ್ಟು ಜನ ತಮ್ಮ ಚಿತ್ರಗಳ ಪೋಸ್ಟರ್, ಟೀಸರ್, ಟ್ರೇಲರ್‌ಗಳನ್ನು ದೊಡ್ಡ ನಟರಿಂದ ಬಿಡುಗಡೆ ಮಾಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ, ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ ಎಂದು ಯಶ್ (Yash) ಹೇಳಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್ 28ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲುಲು ಮಾಲ್‍ನಲ್ಲಿ ನಡೆದ…