
ಶಿವಣ್ಣ ನನ್ನನ್ನು ಕ್ಷಮಿಸಿದರೆ ನಾನು ಜೀವನ ಕಟ್ಟಿಕೊಳ್ಳುತ್ತೇನೆ ಎಂದ Madenuru Manu
ಮಡೆನೂರು ಮನು (Madenuru Manu) ಕಳೆದ ಎರಡು ತಿಂಗಳುಗಳಿಂದ ಒಂದಲ್ಲ ಒಂದು ವಿವಾದದಲ್ಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೆಲವು ದಿನಗಳ ಕಾಲ ಜೈಲುಪಾಲಾಗಿದ್ದರು. ಅದರ ಜೊತೆಗೆ ಶಿವರಾಜಕುಮಾರ್, ದರ್ಶನ್ (Challenging star Darshan) ಮತ್ತು ಧ್ರುವ (Dhruva Sarja) ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮನು, ಅದಕ್ಕೆ ಚಿತ್ರರಂಗದಿಂದ ಬ್ಯಾನ್ ಸಹ ಆಗಿದ್ದರು. ಇದೀಗ ಬೇಲ್ ಮೇಲೆ ಹೊರಗೆ ಬಂದಿರುವ ಅವರು, ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನನಾಡಿರುವ ಮನು, ‘ನನ್ನ…